ಚಳ್ಳಕೆರೆ : ಶಿಕ್ಷಣ ಎಂಬುದು ಕೇವಲ ನೌಕರಿ ಪಡೆಯಲು ಎಂಬ ಮನೋಭಾವ ತಾಳದೆ ಅದನ್ನು ಜ್ಞಾರ್ನಜನೆಗೆ ಎಂಬುದು ಮನಗಾಣಬೇಕು ಎಂದು ಪಿಎಸ್ಐ ತಿಮ್ಮಣ್ಣ ಹೇಳಿದ್ದಾರೆ.
ಅವರು ಬುರುಜನರೊಪ್ಪ ಗ್ರಾಮದಲ್ಲಿ
ವಿಶ್ವಜ್ಯೋತಿ ಸಮಾನತವಾದಿ ಶ್ರೀ. ಬಸವೇಶ್ವರ ಜಯಂತಿಯ ಪ್ರಯುಕ್ತ BSc B.Ed & P.U.C ಯಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು
ಶಿಕ್ಷಣ ಹುಲಿಯ ಹಾಲು ಇದ್ದಾಗೆ ಹಾಲು ಕುಡಿದವರು ಗರ್ಜಿಸಲೇ ಬೇಕು ಎಂದರು.
ಈದೇ ಸಂಧರ್ಭದಲ್ಲಿ ನಿವೃತ್ತ ರೈಲ್ವೆ ಇಲಾಖೆ ಅಧಿಕಾರಿ ಷಣ್ಮುಖಪ್ಪ,
ಡಾII ಹೆಚ್ ನಾಗರಾಜ ಸಹಾಯಕ ಕೃಷಿ ನಿರ್ದೇಶಕರು ತುಮಕೂರು, ತಿಮ್ಮಣ್ಣ ಸಬ್ ಇನ್ಸ್ಪೆಕ್ಟರ್ ಎಸ್ . ಪಿ. ಆಫೀಸ್ ಶಿವಮೊಗ್ಗ , ತಿಪ್ಪೇಸ್ವಾಮಿ,
ಹಾಗೂ ಬುದ್ಧ ಬಸವ ಅಂಬೇಡ್ಕರ್ ಸಾಂಸ್ಕೃತಿಕ ಸೇವಾ ಸಮಿತಿ (ರಿ), ಗ್ರಾಮಸ್ಥರು ಹಾಗೂ “ಸನ್ಮಾನಿತ ವಿದ್ಯಾರ್ಥಿಗಳಾದ ” ಕುಮಾರಿ ರಮ್ಯಶ್ರೀ ಎಸ್ ಆರ್ ,ಆದಿತ್ಯ ಡಿ ,ತರುಣ್ ಶರ್ಮ, ಎಂ ಸೌಂದರ್ಯ. ಎಂ, ಭಾರ್ಗವರಾಮ್. ಪಿ, ಪರಶುರಾಮ್ ಎಂ. ಜೀವನ್ ಎಂ, ಅಶ್ವಿನಿ ಎಂ ಹಾಗೂ ಬುರುಜನರೊಪ್ಪ ಗ್ರಾಮಸ್ಥರು ಭಾಗವಹಿಸಿದ್ದರು.