ಚಳ್ಳಕೆರೆ : ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದ ಎನ್.ರಘುಮೂರ್ತಿ ರವರು ತಮ್ಮ ಕ್ಷೇತ್ರದ ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ಕರೆದು‌ ಮುಂದಿನ ನಿರ್ಣಯಕ್ಕೆ ಸಜ್ಜಾಗಿದ್ದಾರೆ.

ಅದರಂತೆ ಕಳೆದ ಮೂರು ದಿನಗಳಿಂದ ಮಹತ್ವದ ಸಭೆಗಳಲ್ಲಿ ಅಪಾರ ‌ಸಂಖ್ಯೆಯಲ್ಲಿ ಕಾರ್ಯಕರ್ತರು ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಕೃಡಿಕರಿಸುವ ಎನ್ ರಘುಮೂರ್ತಿ ಮುಂದಿನ ನಿರ್ಣಯಕ್ಕೆ ಕೈಗೊಂಡಿದ್ದಾರೆ.

ಇನ್ನೂ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳ‌ ಅವಧಿಯಲ್ಲಿ ಮಾಡಿದ ಸೇವೆಯಲ್ಲಿ ಹಾಗೂ ಮತದಾರ ಒಡನಾಡಿಯಗಿ ಇರುವ ಕಾರ್ಯಗಳನ್ನು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮುಖಂಡರು ಬೆಂಬಲಿಗರು, ಹಾಗೂ ಕಾರ್ಯಕರ್ತರು ದಿನವೀಡಿ ರಘುಮೂರ್ತಿ ಯನ್ನು ಬೇಟಿ ಮಾಡಿ ಮುಂದಿನ ನುರ್ಣಯಕ್ಕೆ ಯಾವ ಅಭ್ಯರ್ಥಿ ಪರ ನಿಲ್ಲುತ್ತಾರೆ ಎಂಬುದು ಮಾತ್ರ ನೀಗೂಡವಾಗಿದೆ.

ಇನ್ನೂ ಕ್ಷೇತ್ರದಲ್ಲಿ ಈಗಾಗಲೇ ನಾಲ್ಕು ಜನ ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಸಿ ಕ್ಷೇತ್ರದಲ್ಲಿ ಉರಿಯಾಳುಗಳಾಗಿ ಮತದಾರರ ಓಲೈಕೆಯಲ್ಲಿ ತಲ್ಲಿನರಾಗಿದ್ದಾರೆ.

ಇನ್ನೂ ಟಿಕೆಟ್ ಕೈ ತಪ್ಪಿದ ಎನ್.ರಘುಮೂರ್ತಿ ನಿಲುವು ಯಾರ ಪರ ಎನ್ನುವುದು ಮಾತ್ರ ಗೊಚರಿಸದಾಗಿದೆ. ಇನ್ನೂ

ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಟಿ.ರಘುಮೂರ್ತಿ ಪರ ನಿಲ್ಲುವರೋ ಅಥವಾ ಜೆಡಿಎಸ್ ಪಕ್ಷದ ಎಂ.ರವೀಶ್ ಕುಮಾರ್ ಪರ ಒಲವೊ ಇಲ್ಲ ಬಿಜೆಪಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ನಿಂತು ಮತಯಾಚನೆ ಮಾಡುವರೋ ಅಥವಾ ಪಕ್ಷೇತರ ಅಭ್ಯರ್ಥಿ ಪರ ನಿಂತು ರಾಜಕೀಯ ಪಕ್ಷಗಳನ್ನು ತ್ಯಾಜಿಸುವರೋ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!