ಚಳ್ಳಕೆರೆ : ಕಳೆದ ಚುನಾವಣೆಗಳಲ್ಲಿ ಅತೀ ಕಡಿಮೆ ಮತದಾನವಾದ ಮತಗಟ್ಟೆಗಳಿಗೆ ಇಂದು ಚುನಾವಣೆ ಅಧಿಕಾರಿಗಳು, ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷರು, ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ರಾಜ್ಯದಲ್ಲಿ ನಿಗಧಿಯಾದ ಶೇಕಡವಾರು ಮತದಾನ ರಷ್ಟರಲ್ಲಿ ಅತೀ ಕಡಿಮೆ ಮತದಾನವಾದ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಸುಮಾರು 22 ಮತಗಟ್ಟೆಗಳಲ್ಲಿ ಅತೀ ಕಡಿಮೆ ಮತದಾನ ಮಾಡುವ ಮತಗಟ್ಟೆಗಳಿಗೆ ಅಧಿಕಾರಿಗಳು ತೆರಳಿ ಮತದಾರರಿಗೆ ಜಾಗೃತಿ ಮೂಡಿಸಿದರು.
ಇನ್ನೂ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಚುನಾವಣೆ ಅಧಿಕಾರಿ ಬಿ.ಆನಂದ್ ರವರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಬೆಳೆಗೆರೆ, ಪೇಲರಹಟ್ಟಿ, ಸಿದ್ದೇಶ್ವರನ ದುರ್ಗ, ಹಾಗೂ ನಗರ ಪ್ರದೇಶದ ಗಾಂಧಿನಗರದ ಮತಗಟ್ಟೆ ಕೇಂದ್ರಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ಕೇಂದ್ರಗಳಲ್ಲಿ ಶೇ 100 ರಷ್ಟು ಮತದಾನ ನಡೆಯ ಬೇಕೆಂಬ ಹಿತ ದೃಷ್ಠಿಯಿಂದ ಮತಗಟ್ಟೆ ಕೇಂದ್ರಗಳಿಗೆ ನಿರ್ಭೀತಿಯಿಂದ ಮತದಾರರು ಮತಗಟ್ಟೆಗಳಿಗೆ ಬಂದು ಮತಚಲಾಯಿಸಲು ಅಗತ್ಯ ಭದ್ರತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಿಎಸ್‌ಐ ಸತೀಶ್ ನಾಯ್ಕ ಮಾತನಾಡಿ, ಈ ಬಾರಿ ವಿಶೇಷವಾಗಿ ವಿಕಲಚೇತನರಿಗೆ ಮತಗಟ್ಟೆಗೆ ಬಾರದಂತಹವರಿಗೆ ಮನೆಯಲ್ಲಿ ಮತಚಲಾಯಿಸಲು ಅಂಚೆ ಮತದಾನದ ವ್ಯವಸ್ಥೆ ಅಥವಾ ವಿಶೇಷ ವಾಹನ ವ್ಯವಸ್ಥೆ ಮಾಡಲಾಗುವುದು ಮತದಾರರು ನಿರ್ಭೀತಿಯಿಂದ ಮತದಾನ ಮಾಡಬೇಕು, ನಿಮ್ಮ ಹಕ್ಕು ನಿವು ಚಲಾಯಿಸಬೇಕು, ವಿಶೇಷವಾಗಿ ಕಡಿಮೆ ಮತದಾನ ನಡೆದ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣದ ಹೆಚ್ಚಳಕ್ಕೆ ಹೆಚ್ಚಿನ ಅರಿವು ಮೂಡಿಸುವ ಜತಗೆ ಭದ್ರತೆ ಒದಗಿಸಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಹಾನ್ ಪಾಷ, ಕಂದಯಾ ನಿರೀಕ್ಷಕ ಲಿಂಗೇಗೌಡ, ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್ ಇತರರಿದ್ದರು.

Namma Challakere Local News
error: Content is protected !!