ಚಳ್ಳಕೆರೆ : ರಾಜ್ಯದಲ್ಲಿ ಸು.120 ಸ್ಥಾನಗಳು ಬರುವ ನಿರೀಕ್ಷೆಯಿದೆ. ಆದ್ದರಿಂದ ರಾಜ್ಯದ ಮತದಾರರು ಐದು ವರ್ಷಗಳ ಕಾಲ ಸಂಪೂರ್ಣ ಬಹುಮತ ನೀಡಿ ನನ್ನ ಕೈಗೆ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತದಾರರನ್ನು ಕೋರಿದರು.
ಅವರು ಚಳ್ಳಕೆರೆ ಕ್ಷೇತ್ರದ ತುರುವನೂರು ಹೋಬಳಿಯಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿಜ ಅವರು ಇನ್ನೂ ರಾಜ್ಯದಲ್ಲಿ ಯಾವುದೇ ರೈತರು ಸಾಲ ಮಾಡದೆ ಜೀವನ ನಡೆಸುವ ರೈತಪರ ಸರಕಾರ ನಡೆಸುವೆ, ರೈತಾಪಿ ವರ್ಗಕ್ಕೆ ಬಿತ್ತನೆ ಮಾಡಲು ಬೀಜ ಹಾಗೂ ಗೊಬ್ಬರಕ್ಕೆ ಎಕರೆಗೆ ಹತ್ತು ಸಾವಿರ ಹಣವನ್ನು ಸರಕಾರದಿಂದ ನೀಡಲಾಗುವುದು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಅಧಿಕಾರ ಹಿಡಿದ ಕೇವಲ ಒಂದು ಗಂಟೆಯೊಳಗೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇನೆ. ಕೊಟ್ಟ ಮಾತನ್ನು ತಪ್ಪಿದರೆ ಜಾತ್ಯತೀತ ಜನತಾದಳವನ್ನು ವಿಸರ್ಜಿಸುತ್ತೇನೆ, ದೇಶದ ಸ್ವಾತಂತ್ರö್ಯ ಹೋರಾಟಗಾರರ ತವರು ಗ್ರಾಮ ತುರುನೂರು ಇಲ್ಲಿ ಗಾಂಧಿಜೀಯವರ ಪುತ್ತಳಿ ಇದ್ದು ಇಂತಹ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಬಹುದಿನದ ಬೇಡಿಕೆಯಾಗಿದ್ದು ನನ್ನ ಅಧಿಕಾರ ಅವಧಿಯಲ್ಲಿ ಹೊಸ ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದೇನೆ ಆ ಸಂದರ್ಭದಲ್ಲಿ ಇದು ನನ್ನ ಗಮನಕ್ಕೆ ಯಾರು ತಂದಿಲ್ಲ 2018ರಲ್ಲಿ ನನ್ನ ಗಮನಕ್ಕೆ ಬಂದಿದ್ದರೆ ಆಗಲೇ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುತ್ತಿದ್ದೆ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ತುರುನೂರು ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗುವುದು ಎಂದರು.
ಇನ್ನೂ ತುರುನೂರು ಹೋಬಳಿ ಕೇಂದ್ರದಲ್ಲಿ ಸಾವಿರಾರು ಜನರ ಮುಂದೆ ಬಹಿರಂಗ ಸಭೆ ನಡೆಸಿ ನಂತರ ಕುನಬೇವುಗ್ರಾಮ, ಬೆಳಗಟ್ಟ, ಹಾಯ್ಕಲ್, ಪೇಲರಹಟ್ಟಿ, ಈಗೇ ರಾಮಜೋಗಿಹಳ್ಳಿ, ಬಾಲೆನಹಳ್ಳಿ ಕ್ರಾಸ್, ಮೂಲಕ ರೋಡ್ ಶೋ ಮುಗಿಸಿ ನಂತರ ಊಟಕ್ಕೆ ಚಳ್ಳಕೆರೆ ನಗರದ ಜೆಡಿಎಸ್ ಮುಖಂಡ ಎಲೆ ವೀರದ್ರಣ್ಣ ಇವರ ಮನೆಯಲ್ಲಿ ಊಟ ಮಾಡಿಕೊಂಡು ನಂತರ ಪರಶುರಾಂಪುರ ಹೋಬಳಿಯತ್ತ ಪಂಚರತ್ನ ಯಾತ್ರೆ ಪ್ರಯಾಣ ಬೆಳೆಸಿ ನಂತರ ಚಳ್ಳಕೆರೆ ನಗರದ ಮಸೀದಿಗೆ ಬೇಟಿ ನೀಡಿ ನಂತರ ನಗರದ ಬಿಎಂಜಿಹೆಚ್‌ಎಸ್ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು.
ಕಳೆದ 2018ರ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ರವೀಶ್‌ಕುಮಾರ್ ಕೇವಲ 5 ಸಾವಿರ ಮತಗಳ ಹಂತದಲ್ಲಿ ಅಂತರದಿAದ ಸೋತಿದ್ದಾರೆ ಅದ್ದರಿಂದ ಈ ಬಾರಿ ನನ್ನ ಮುಖ ನೋಡಿ ನನ್ನ ಮೇಲೆ ಭರವಸೆ ಇಟ್ಟು ಈ ಹುಡುಗನನ್ನು ಆಯ್ಕೆ ಮಾಡಿ ಕಳಿಸಿ ಎಂದು ಅಭ್ಯರ್ಥಿ ಎಂ.ರವೀಶ್ ಕುಮಾರ್‌ನ್ನು ಉದ್ದೇಶಿಸಿ ಮಾತನಾಡಿದರು,
ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿವಿಧ ಯೋಜನೆಗಳು :
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದರೆ ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನ, ರೈತರ ಸಾಲ ಮನ್ನ, ಎಲ್‌ಕೆಜೆ ಯಿಂದ ಪಿಯುಸಿ ವರೆಗೆ ಸರಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಇಂಗ್ಲೀಸ್ ಮಾಧ್ಯಮ, ಸರಕಾರಿ ಶಾಲೆಗಳ ಅಭಿವೃದ್ಧಿ, ಪ್ರತಿ ಗ್ರಾಪಂ ಕೇಂದ್ರದಲ್ಲಿ 30 ಹಾಸಿಗೆ ಆಸ್ಪತ್ರೆ, ಉಚಿತ ಚಿಕಿತ್ಸೆ, ಕ್ಯಾನ್ಸ್ರ‍್ರ್ ಸೇರಿದಂತೆ ಮಾರಕ ಖಾಯಿಲೆ, ಕಿಡ್ನಿ ಸೇರಿದಂತೆ ಹಲವು ಗಂಬೀರ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ, ರೈತರಿಗೆ ಬೀಜ ಗೊಬ್ಬರ ಖರೀದಿಗೆ ಪ್ರತಿ ರೈತರ ಖಾತೆಗೆ 19ಸಾವಿರ ಉಚಿತವಾಗಿ ನೀಡುವುದು ಸೇರಿದಂತೆ ಹಲವು ಜನ ಪ್ರರ ಯೋಜನೆಗಳನ್ನು ಜಾರಿಗೊಳಿಸಲಾಗುವುದು.
ಇಂದಿನ ಪರಸ್ಥಿತಿಯಲ್ಲಿ ಪಂಚರತ್ನ ಯೋಜನೆ ಅತ್ಯವಶ್ಯಕವಾಗಿದೆ. ಬೆಲೆ ಏರಿಕೆ, ಮಕ್ಕಳ ಶಿಕ್ಷಣ, ಅನಾರೋಗ್ಯ ಸಮಸ್ಯೆ, ವಸತಿ ಸೇರಿದಂತೆ ಹಲವಾರು ಸವಾಲುಗಳು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ರೈತ ಎಂದಿಗೂ ಸಾಲಗಾರರಾಗದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದೇ ನನ್ನ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ 2018ರ ಚುನಾವಣೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದಂತೆ ಎಲ್ಲ ವರ್ಗದ 28 ಸಾವಿರ ಕೋಟಿ ಮನ್ನಾ ಮಾಡಿದ್ದೇನೆ. ಈ ಬರೀ ಸಾಲ ಮನ್ನಾ ಮಾಡುವ ಯೋಜನೆ ರೂಪಿಸಿಲ್ಲ.
ಬದಲಾಗಿ ರೈತರನ್ನೇ ಸಾಲಗಾರರಾಗದಂತೆ ಕಾರ್ಯಕ್ರಮ ರೂಪಿಸಿ 25 ಸಾವಿರ ಕೋಟಿ ಯೋಜನೆ ತಯಾರಿಸಿದ್ದೇನೆ. ಇದೆಲ್ಲವೂ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೊಂದಾಣಿಕೆಯಿAದ ಸಾಧ್ಯವಾಗುವುದಿಲ್ಲ. ಆದ್ದರಿಂದ ಜಾತ್ಯತೀತ ಜನತಾ ದಳಕ್ಕೆ 123 ಸ್ಥಾನ ಗೆಲ್ಲಿಸಿ ಪೂರ್ಣಾವಧಿ ಸರ್ಕಾರವನ್ನು ರೂಪಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದರು.
ಬಯಲು ಸೀಮೆ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆ ನೆಲಡಲೆ ಬೆಳೆಯುತ್ತಾರೆ ಸುಮಾರು 20 ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆಯಲಿಲ್ಲದೆ ರೈತರ ಸಾಲದ ದವಡೆಗೆ ಸಿಲುಕಿದ್ದಾರೆ. ಶೇಂಗಾ ಬೆಳೆಯಿಲ್ಲದೆ ಎಣ್ಣೆ ಮಿಲ್‌ಗಳು ಮುಚ್ಚಿ ಹೋಗಿದ್ದು ಇತ್ತು ಉದ್ಯೋಗವೂ ಇಲ್ಲದೆ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಜೆಡಿಎಸ್ ಸರಕಾರ ಬಂದ ತಕ್ಷಣ ಮತ್ತೆ ರೈತರಿಗೆ ಹಾಗೂ ಎಣ್ಣೆ ಮಿಲ್‌ಗಳಿಗೆ ಮರು ಜೀವ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣರ ಬದುಕು ದುರ್ಭರವಾಗಿದೆ. ಬದುಕು ನಡೆಸಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಅವರಿಗೆ ವೈದ್ಯಕೀಯ ಸೌಲಭ್ಯ ದೊರೆಯುತ್ತಿಲ್ಲ. ಗ್ರಾಮೀಣ ಜನತೆಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಲೆ ದೊರೆಯಬೇಕು. ಯುವಕರು ಸ್ವಾವಲಂಬಿಗಳಾಗಬೇಕು. ರಾಜ್ಯ ವಾಸಿಗಳ ಬದುಕು ನೆಮ್ಮದಿಯುತ ವಾಗಿರಬೇಕೆಂಬ ಚಿಂತನೆಯ ಫಲವೇ ಪಂಚರತ್ನ ಯೋಜನೆ. ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಶಕ್ತಿಯನ್ನು ಜನತೆ ನೀಡಿದರೆ ಈ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ ಎಂದು ಹೇಳಿದರು.
ಈ ಬಹಿರಂಗ ಸಭೆಯಲ್ಲಿ ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿದರು. ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಇತರರು ಸಭೆಯಲ್ಲಿ ಜಿಲ್ಲಾ ಹಾಗೂ ಕ್ಷೇತ್ರದ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಗೂ ಹೋಬಳಿ ಕೇಂದ್ರದಿAದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.