ಕನ್ನಡಪರ ಸಂಘಟನಕಾರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ

ಚಳ್ಳಕೆರೆ : ಕನ್ನಡ ಪರ ಸಂಘಟನಾಕರಾರರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಕನ್ನಡ ರಕ್ಷಣಾ ಮತ್ತು ಸಾಂಸೃತಿಕ ವೇದಿಕೆ ಪದಾಧಿಕಾರಿಗಳು ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಬೆಂಗಳೂರು-ಮೈಸೂರು ಮಾರ್ಗದ ದಶಪಥ ಹೆದ್ದಾರಿ ರಾಮನಗರ ಸಮೀಪ ಶೇಷಗಿರಿ ಟೋಲ್ ಬಳಿ ಶುಲ್ಕ ಪಾವತಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಕನ್ನಡ ಪರ ಸಂಘಟನಕಾರನ್ನು ಪೊಲೀಸರು ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇನ್ನೂ ಪ್ರಜಾಪ್ರಭುತ್ವವನ್ನು ಅತ್ತಿಕ್ಕುವ ಕೆಲಸವಾಗುತ್ತಿದೆ ಎಂದು ಕನ್ನಡ ಪರ ರಕ್ಷಣಾ ಮತ್ತು ಸಾಂಸೃತಿಕ ವೇದಿಕೆ ಅಧ್ಯಕ್ಷ ಕರ‍್ಲಕುಂಟೆ ತಿಪ್ಪೆಸ್ವಾಮಿ ಆರೋಪಿಸಿದರು.
ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಅಭಿವೃದ್ದಿ ಕಾರ್ಯಗಳು ಮಾಡುತ್ತಿರುವ ಸರ್ಕಾರಗಳು, ಸಾರ್ವಜನಿಕರಿಗೆ ಮುಕ್ತವಾಗಿ ಸೇವೆ ನೀಡಲು ಬದಲು ಕುಡಿಯುವ ನೀರಿನಿಂದ ಹಿಡಿದು ಪ್ರತಿದಿನದ ಪ್ರಯಾಣಕ್ಕೆ ಬಳಕೆಯಾಗುವ ರಸ್ತೆಯಲ್ಲಿ ಓಡಾಡುವುದಕ್ಕೂ ಶುಲ್ಕ ಪದ್ದತಿ ಜಾರಿ ಮಾಡಲಾಗತ್ತಿದೆ.
ಇದರಿಂದ ಸಾಮಾನ್ಯ ಜನರ ಬದುಕು ಕಷ್ಟವಾಗುತ್ತಿದೆ. ಇಂತಹ ಜನವಿರೋಧಿ ಕಾರ್ಯಗಳನ್ನು ವಿರೋಧಿಸುವ ಕನ್ನಡ ಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತದೆ. ಸಂವಿಧಾನ ಬದ್ದವಾದ ಹೋರಾಟಗಳನ್ನ ಧಮನ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಕಿಡಿಕಾರಿದರು.

ನಾಡ ವಿರೋಧಿ ಆಡಳಿತ ಮಾಡುವ ಸರ್ಕಾರಗಳಿಗೆ ನಾಡಿನ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ.ಕೂಡಲೇ ಕನ್ನಡ ಪರ ಸಂಘಟನೆಗಳ ಮೇಲೆ ದಾಖಲು ಮಾಡಿರುವ ನಾಡಿ ಎಲ್ಲಾ ಭಾಗದ ಪ್ರಕರಣಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿ ವೇದಿಕೆ ಅಧ್ಯಕ್ಷ ಕರ‍್ಲಕುಂಟೆ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಪಿ.ಟಿ.ಮಂಜುನಾಥ, ಉಜ್ಜೀನಪ್ಪ, ಸ್ವಾಮಿ, ವೈ. ತಿಪ್ಪೇಸ್ವಾಮಿ, ಗೋವಿಂದರಾಜ್, ಲಕ್ಷಿö್ಮಪುರ ಓಬಣ್ಣ, ಸಮಾಜ ಸೇವಕ ಹೆಚ್ ಎಸ್ ಸೈಯದ್ ಸೇರಿದಂತೆ ಮುಂತಾದವರು ಇದ್ದರು.

About The Author

Namma Challakere Local News

You missed

error: Content is protected !!