ಚಳ್ಳಕೆರೆ : ಬಯಲು ಸೀಮೆಯಲ್ಲಿ ಕನ್ನಡ ಕಲರವ ಮೊಳಗಿದೆ, ಬಯಲು ಸೀಮೆಯಲ್ಲಿ ಅಕ್ಷರ ಜಾತ್ರೆ ಮಾಡುವ ಮೂಲಕ ಎಲ್ಲಾ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬಯಲು ರಂಗಮAದಿರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.
ಬಯಲು ಸೀಮೆಯಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಬರಡು ಸೀಮೆಯನ್ನು ಹಸಿರು ವಲಯವನ್ನಾಗಿಸುವುದು, ತಳಕಿನ ವೆಂಕಣ್ಣಯ್ಯ, ಜಾನಪದ ಸಿರಿಯಜ್ಜಿ, ಬೆಳೆಗೆರೆ ಕೃಷ್ಣಶಾಸ್ತಿç ಸೇರಿದ ಹಲವು ಸಾಹಿತಿಗಳ ಜನ್ಮ ಸ್ಥಳವಾಗಿದ್ದು ಕನ್ನಡ ಭವನ, ನಾಡೋಜ ದಿ.ಸಿರಿಯಜ್ಜಿಯ ಸ್ಮಾರಕ, ಶತಮಾನ ಕಂಡ ಶಾಲೆಗಳನ್ನು ಉನ್ನತೀಕರಿಸಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು, ಇಲ್ಲಿನ ಪ್ರಮುಖ್ಯತೆ ಇದೆ, ತಾಲೂಕಿನ ಬಡ ಕುಟುಂಬದ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಅರಣ್ಯ ಕೃಷಿ ಪದ್ದತಿ, ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಭಾರತದ ಸಂಸ್ಕ್ರತಿ ಕನ್ನಡದ ಮೇಲೆ ನಿಂತಿದೆ. ಭಾಷೆಯಲ್ಲಿ ಮೇಲು-ಕೀಳು ಎಂಬುದಿಲ್ಲ. ಉಳಿದ ಭಾಷೆಗಳನ್ನು ಗೌರವಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು, ನಮ್ಮ ನಾಡು, ನುಡಿಯ ಬಗ್ಗೆ ಬರಿ ಅಭಿಮಾನವಿದ್ದರೆ ಸಾಲದು ನಾಡಿಗಾಗಿ ನಾವು ತ್ಯಾಗ ಮತ್ತು ಸೇವೆ ಸಲ್ಲಿಸಬೇಕು ಇಂತಹ ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಜನರು ಭಾಗವಹಿಸಬೇಕಿತ್ತು ಆದರೆ ಸಾಹಿತ್ಯಕ್ಕೆ ಜನರು ಬಾರದೆ ಇರುವುದು ವಿಷಾದನೀಯ ಎಂದರು.

ನಿಕಟಪೂವರ್ಗ ತಾಲೂಕು ಸಮ್ಮೇಳನಾಧ್ಯಕ್ಷ ಹಾಗೂ ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ ಮಾತನಾಡಿ ಸ್ಥಳಿಯರಿಗೆ ಉದ್ಯೋಗ ಕಲ್ಪಿಸಬೇಕು, ರಾಣಿಕೆರೆ ಪೀಡರ್ ಚಾನಲ್, ಕೆರೆಗಳು ಅಭಿವೃದ್ಧಿ, ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಪಡಿಸಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ, ಸರಕಾರಿ ಶಾಲೆಗಳನ್ನು ಮುಚ್ಚದಂತೆ ಅಭಿವೃದ್ಧಿ ಪಡಿಸಬೇಕು ಇದರಿಂದ ಗಡಿಭಾಗದ ಕನ್ನಡ ನಶಿಸುವ ಮೂಲಕ ಅಳಿವಿನಂಚಿಗೆ ಹೋಗುತ್ತದೆ. ಬಳ್ಳಾರಿ ಚಿತ್ರದುರ್ಗ ಬರದ ನಾಡು ಅತಿ ಕಡಿಮೆ ಮಳೆ ಬೀಳುವ ಪ್ರದೇಶ, ಹಿಂದುಳಿದ ಜಿಲ್ಲೆಗಳು ಎಂದು ಎನಿಸಿಕೊಂಡಿದ್ದು ವಿಶೇಷ ಅನುದಾನದಡಿಯಲ್ಲಿ ಕಲ್ಯಾಣ ಕರ್ನಾಟ ಎಂದು ಹೇಗೆ ಅಭಿವೃದ್ಧಿಯಾಗಿದೆಯೋ ಅದೇ ರೀತಿ ಚಿತ್ರದುರ್ಗ, ಬಳ್ಳಾರಿ ಎರಡು ಜಿಲ್ಲೆಗಳನ್ನು 371 ಜೆ ಅಡಿಯಲ್ಲಿ ಜಾರಿಗೆ ತರುವ ಮೂಲಕ ಪರಶುರಾಂಪುರ ತಾಲೂಕು ಕೇಂದ್ರ, ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಸಂಸ್ಥೆ, ಡಿಆರ್ ಡಿಒ, ಸೇರಿದಂತೆ ಕೇಂದ್ರದ ಸಂಸ್ಥೆಗಳು ಸ್ಥಾಪನೆಯಾಗಬೇಕಿದೆ ಎಂದು ಸಮ್ಮೆಳನದಲ್ಲಿ ಒತ್ತಾಯಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ ಬುಡಕಟ್ಟು ಸಂಸ್ಕೃತಿಯ ಕಾಶಿ ಎಂದರೇ ಅದು ಚಳ್ಳಕೆರೆ ಕ್ಷೇತ್ರ, ಗ್ರಾಮೀಣ ಸಾಹಿತ್ಯ ಪರಿಷತ್ ಕಟ್ಟುವ ಮೂಲಕ ಈಡೀ ಗಡಿ ಭಾಗದಲ್ಲಿ ಸಾಹಿತ್ಯ ಚಿಲುಮೆ ಸಾರಿದ ತಿಪ್ಪಣ್ಣ ಮರಿಕುಂಟೆರವರ ಸಾಹಿತ್ಯದ ಗೀಳು ಇಂದು ಹೆಮ್ಮರವಾಗಿದೆ, ಸಾಹಿತಿಗಳ ನಾಡು ಎಂದರೆ ಅದು ಚಳ್ಳಕೆರೆ, ಇಲ್ಲಿ ಕುವೆಂಪುರವರ ಗುರುವಾದ ತಳಕಿನ ವೆಂಕಣಯ್ಯನವರ ತವರೂ ನೆಲದಲ್ಲಿ ಸಮ್ಮೇಳನ ಜರುಗುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಕನ್ನಡಮ್ಮನ ರಥ ನಗರದ ಚಳ್ಳಕೆರೆಮ್ಮ ದೇವಾಸ್ಥಾನದಿಂದ ಪ್ರಾರಂಭವಾಗಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಲಮರಹಳ್ಳಿ ಡಾ.ಮಲ್ಲಿಕಾರ್ಜುನ ಇವರನ್ನು ಸಾರೋಟದಲ್ಲಿ ವಿವಿಧ ಕಲಾ ತಂಡಗಳೊAದಿಗೆ ಪ್ರಮುಖ ರಾಜಾ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇಧಿಕೆಯತ್ತ ಕರೆ ತಂದರು.
ನಂತರ ಕಾರ್ಯಕ್ರಕ್ಕೂ ಮುನ್ನ ಬೆಳಗ್ಗೆ 7 ಗಂಟೆಗೆ ತಹಶೀಲ್ದಾರ್ ರೇಹಾನ್ ಪಾಷ ರಾಷ್ಟçಧ್ವಜರೋಹಣ ನೆರವೇರಿಸಿದರು, ನಗರಸಭೆ ಅಧ್ಯಕ್ಷೆ ಸುಮಕ್ಕ ನಾಡಧ್ವಜರೋಹಣ, ತಾಲೂಕು ಅಧ್ಯಕ್ಷ ಪರಿಷತ್ ಧ್ವಜರೋಹಣ, ಸಾಹಿತಿ ಮರಿಕುಂಟೆ ತಿಪ್ಪಣ್ಣ ಬೆಳಗೆರೆ ಕೃಷ್ಣ ಶಾಸ್ತಿçಯವರ ಮಹಾಧ್ವರವನ್ನು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸ್ಥಾಯಿಸಮಿತಿ ಅಧ್ಯಕ್ಷೆ ಎಂ.ಜೆ,ರಾಘವೇAದ್ರ, ಸಾಹಿತಿ ಮಿರಸಾಬಿಹಳ್ಳಿ ಶಿವಣ್ಣ, ಮಾಜಿ ಗಡಿನಾಡು ಅಧ್ಯಕ್ಷ ರಾಮಚಂದ್ರಪ್ಪ, ನಾಟಕ ಅಕಾಡಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ಕ.ಸ,ಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಡಾ.ಎಂ.ಮAಜಣ್ಣ, ಸಾಹಿತಿ ಟಿ.ಜೆ.ತಿಪ್ಪೇಸ್ವಾಮಿ , ಪಾಪಣ್ಣ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ ಇಒ ಹೊನ್ನಯ್ಯ, ಮೋದೂರು ತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!