ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಜಾರ ಸಮುದಾಯ ಆರೋಪ..!
ದೂರು ನೀಡಿದರು ಪ್ರಕರಣ ದಾಖಲಿಸದ ಅಧಿಕಾರಿಗಳು..!
ಚಳ್ಳಕೆರೆ : ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಜಾರ ಸಮುದಾಯ ಆರೋಪ
ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಪೋಲಿಸ್ ಅಧಿಕಾರಿಗಳ ವಿರುದ್ದ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ತಳಕು ಹೋಬಳಿಯ ವಲಸೆ ಗ್ರಾಮದ ಶಂಕ್ರನಾಯ್ಕ(60) ಜಮೀನು ಕೆಲಸಕ್ಕೆ ಹೋಗುವಾಗ ಇವರ ಮೇಲೆ ನಡೆದ ಪ್ರಕರಣಕ್ಕೆ ವೀರೇಶ್, ತಿಮ್ಮಣ್ಣ ಎಂಬುವರು ಏಕಾಏಕಿ ದೊಣ್ಣೆ, ಕಲ್ಲುಗಳಿಂದ ಶಂಕ್ರನಾಯ್ಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ತಲೆಗೆ ತ್ರೀವ್ರತರಹ ಪೆಟ್ಟಾಗುವಂತೆ ಗಾಯಗೊಳಿಸಿದ ಹÀಲ್ಲೆ ಮಾಡಿದವರು ವಿರುದ್ದ ತಳಕು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸಹ ದೂರು ದಾಖಲಿಸಿಕೊಂಡು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಹಲ್ಲೆ ಮಾಡಿದವರು ರಾಜಾರೋಷವಾಗಿ ಗ್ರಾಮದಲ್ಲಿ ಓಡಾಡುತ್ತಿರುವುದರಿಂದ ಮತ್ತೆ ನಮ್ಮ ಬೇದರಿಕೆ ಹಾಕುತ್ತಿದ್ದು ಹಲ್ಲೆಗೊಳಗಾದ ಶಂಕ್ರನಾಯ್ಕ ಹಾಗೂ ಅವರ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ನೀಡ ಬೇಕು ಹಲ್ಲೆ ಮಾಡಿದವರು ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರ‍್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯಿಂದ ಪ್ರತಿಭಟನೆ ನಡೆಸಿ ಮನವಿಸಲ್ಲಿಸಿದರು.
ಪ್ರತಿಭಟನೆಯಲ್ಲಿ ರ‍್ನಾಟಕ ಶಾಂತಿ ಮತ್ತು ಸೌರ‍್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ನಿಂಗನಾಯ್ಕ, ಹನುಮನಾಯ್ಕ, ರವಿ, ಗೋವಿಂದನಾಯ್ಕ, ಮೋಹನ್, ಸಂತೋಷ್, ತಿಪ್ಪೇಸ್ವಾಮಿನಾಯ್ಕ, ಗುಂಡನಾಯ್ಕ, ಇತರರಿದ್ದರು.