ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀ ಪಾತಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.25 ಮತ್ತು 26 ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.
ಗೊರವಿನಕೆರೆ ವಂಶಸ್ಥರ ಆರಾಧ್ಯ ದೈವವಾಗಿರುವ ಶ್ರೀ ಪಾತಲಿಂಗೇಶ್ವರ ಸ್ವಾಮಿಗೆ ಪುರಾತನ ಇತಿಹಾಸವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಿವರಾತ್ರಿ ಪ್ರಯುಕ್ತ ಶ್ರೀಸ್ವಾಮಿಯ ಜಾತ್ರಾ ಮಹೋತ್ಸವವನ್ನು ಭಕ್ತ ವೃಂದ ಅದ್ದೂರಿಯಾಗಿ ನಡೆಸಲು ಇಚ್ಚಿಸಿದ್ದಾರೆ.
ಫೆ.25ರ ಶನಿವಾರ ಸಂಜೆ 3:30ಕ್ಕೆ ಚನ್ನಮ್ಮನಾಗತಿಹಳ್ಳಿ ಗ್ರಾಮದಿಂದ ಸ್ವಾಮಿಯನ್ನು ಬೆಳ್ಳಿರಥದ ಮೂಲಕ ಮೆರವಣಿಗೆ ನಡೆಸಿ ಗ್ರಾದ ಹೊರವಲಯದಲ್ಲಿ ನಡೆಯುವ ಜಾತ್ರಾ ಸ್ಥಳಕ್ಕೆ ಸ್ವಾಮಿಯನ್ನು ನೂರಾರು ಭಕ್ತರು ಹಾಗೂ ವಿವಿಧ ಕಲಾತಂಡಗಳೊAದಿಗೆ ಭವ್ಯವಾಗಿ ಕರೆತರಲಾಗುವುದು.
ಫೆ.26ರ ಭಾನುವಾರ ಮುಂಜಾನೆ 5ಕ್ಕೆ ರುದ್ರಾಭಿಷೇಕ, 10ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಬೇಕೆಂದು ವಂಶಸ್ಥರಾದ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ. ಶಾಸಕ ಟಿ.ರಘುಮೂರ್ತಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಶಂಕರ್, ಗೊರವಿನಕೆರೆ ವಂಶಸ್ಥರು ಭಾಗವಹಿಸಲಿದ್ದಾರೆ