ಚಳ್ಳಕೆರೆ : ಬೆಳೆ ಪರಿಹಾರ ಬಿಡುಗಡೆ ಮಾಡಿದ ಹಣವನ್ನು ಅರ್ಹ ರೈತರಿಗೆ ತಲುಪದೆ ಯಾರೋದೋ ಜಮೀನು ಯಾರೋ ಖಾತೆಗೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇನ್ನು ತಾಲೂಕಿನ 6013ರೈತರ ಖಾತೆಗೆ ಬೆಳೆ ಪರಿಹಾರದ ಬಾರದೆ ಇರುವುರಿಂದ ರೈತರು ನಿತ್ಯ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೆ ಪರಿಹಾರದಿಂದ ವಂಚಿತರಾದ ರೈತರಿಗೆ ಹಣವನ್ನು ಬಿಡುಗಡೆ ಮಾಡಬೇಕು. ರೈತರ ಬೆಳೆ ಹಾನಿ ಪರಿ ಹಾರ ವಿತರಿಸುವಲ್ಲಿ ತಾಲ್ಲೂಕು ಆಡಳಿತವು ತಾರತಮ್ಯ ಎಸಗಿದೆ ಎಂದು ರೈತರು ಆರೋಪಿಸಿದ್ದಾರೆ.
ಸರಕಾರ ರೈತರಿಗೆ ಕನಿಷ್ಟ ಎರಡು ಹೆಕ್ಟೇರ್ ಪ್ರದೇಶಕ್ಕೆ ಬೆಳೆ ನಷ್ಟ ಪರಿಹಾರ ನೀಡುವ ಭರವಸೆ ನೀಡಿ ಬಿಡುಗಡೆ ಮಾಡಿದ್ದರೂ ಸಹ ಅರ್ಹ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ ಕೂಡಲೆ ಬೆಳೆ ಪರಿಹಾರ ಹಾಗೂ ವಿತರಣೆಯಲ್ಲಿನ ಲೋಪದೋಷವನ್ನು ಸರಿಪಡಿಸುವಂತೆ ಮನವಿ ನೀಡಿದರು.
ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಗ್ರಾಮದ ರೈತೊಬ್ಬ ಸ್ವಾಮಿ ನನಗೆ ಎರಡು ವರ್ಷಗಳಿಂದ ಬೆಳೆ ನಷ್ಟ ಪರಿಹಾರ ಬಂದಿಲ್ಲ ಎಂದು ತಹಶೀಲ್ದಾರ್ ರೇಹಾನ್ ಪಾಷ ಬಳಿ ಕೈ ಮುಗಿದು ಕೇಳಿ ಕೊಂಡರು.