ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಎಲ್ಲಿ ಹೋಯಿತು ನಿಮ್ಮ ಭರವಸೆಯ ಪ್ರಣಾಳಿಕೆಗಳು, ನುಡಿದಂತೆ ನಡೆಯೋದಕ್ಕೆ ಹಾಗಿಲ್ಲ ರೈತರಿಗೆ ಬೆಂಬಲ ಬೆಲೆ ಇಲ್ಲ. ಕೊವಿಡ್ ಸಂಧರ್ಭದ ಆಸ್ವತ್ರೆಯ ಬಿಲ್‌ಗೆ ಹಣವಿಲ್ಲ, ಸುಖಸುಮ್ಮನೆ ಜನಧನ್ ಖಾತೆ ಮಾಡಿಸಿದಿರೀ, ಅದಕ್ಕೆ ಹಣ ಹಾಕಿಲ್ಲ. ಎಲ್ಲಿಯೋಯಿತು ನಿಮ್ಮ ಅಚ್ಚೆದಿನ ಕೇಂದ್ರ ಮಂತ್ರಿ ನಾರಾಯಣಸ್ವಾಮಿಗಳೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ವ್ಯಂಗ್ಯ ಮಾಡಿದರು.
ಇಡೀ ರಾಜ್ಯದಲ್ಲಿ ಭ್ರಷ್ಟ ಸರಕಾರ ತೆಗೆಯಬೇಕು ಎಂದು ನಿಮ್ಮ ಶಾಸಕರೇ ಹೇಳುತ್ತಾರೆ, 40ರಷ್ಟು ಕಮಿಷನ್ ದಂದೆಯನ್ನು ನಿಮ್ಮ ಶಾಸಕ ಗೂಲಿಹಟ್ಟಿ ಶೇಖರ್ ಆರೋಪಕ್ಕೆ ನಮ್ಮ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ತನಿಖೆ ಮಾಡಿಸಿ ನಿಮ್ಮ ಬಣ್ಣ ಬಯಲು ಮಾಡುತ್ತೆವೆ, 2023ಕ್ಕೆ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ 136 ಸ್ಥಾನ ಗೆಲ್ಲುತ್ತೆವೆ, ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ ಇದ್ದ ಸುಮಾರು 169 ಅಂಶಗಳಲ್ಲಿ ಸು.165 ಅಂಶಗಳನ್ನು ಜಾರಿಗೆ ತಂದಿದ್ದೆವೆ ಬಿಜೆಪಿ ಸುಳ್ಳು ಪ್ರಣಾಳಿಕೆಯಲ್ಲಿ 600ಅಂಶಗಳಲ್ಲಿ ಕನಿಷ್ಟ 60 ಈಡೇರಿಸಲು ಹಾಗಿಲ್ಲ ಎಂದು ಆರೋಪ ಮಾಡಿದರು.