ಚಳ್ಳಕೆರೆ : ತಿಮ್ಮಣ್ಣನಹಳ್ಳಿ ಲಂಬಾಣಿ ತಾಂಡದ ನಿವಾಸಿಗಳ ಸಮುದಾಯದ ವ್ಯಕ್ತಿಗಳು ಮೃತಪಟ್ಟರೆ ಅಂತ್ಯ ಸಂಸ್ಕಾರ ಮಾಡಲೆಂದು, ಸ್ಮಶಾನಕ್ಕಾಗಿ 1.20 ಎಕರೆ ಭೂಮಿ ಗುರತಿಸಲಾಗಿತ್ತು ಸ್ಮಶಾನ ಭೂಮಿಗೆಂದು ಪಹಣ ಮಾಡಿ ಅದ್ದು ಬಸ್ತ್ ದುರಸ್ಥಿ ಮಾಡಿಕೊಂಡುವAತೆ ಗ್ರಾಮಸ್ಥರು ತಾಲೂಕು ಕಛೇರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಳಕು ಹೋಬಳಿಯ ತಿಮ್ಮಣ್ಣನಹಳ್ಳಿ ಲಂಬಾಣಿ ತಾಂಡದ ನಿವಾಸಿಗಳು ಸ್ಮಶಾನಕ್ಕೆ ಭೂಮಿ ಮಂಜುರಾತಿ ನೀಡುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು. ತಳಕು ಹೊಬಳಿಯ ತಿಮ್ಮಣ್ಣನಹಳ್ಳಿ ಗ್ರಾಮದ ಸರಕಾರಿ ರಿ.ಸಂ ನಂ56ಪಿ1 ಸರಕಾರಿ ಸೇಂದಿವನ ಸುಮಾರು 8 ಎಕರೆ ಭೂಮಿ ಇದ್ದು .ಸರಕಾರಿ ಭೂಮಿಯಲ್ಲಿ ಸುಮಾರು ಎರಡು ವರ್ಷಗಳಿಂದ ಕಚೇರಿಗೆ ಅಲೆದಾರೂ ಪ್ರಯೋಜನವಾಗಿಲ್ಲ, ಗ್ರಾಮ ಲೆಕ್ಕಾಧಿಕಾರಿಗಳು ಮೀನಮೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಮೀನು ಇದ್ದವರು ಅವರ ಹೊಲದಲ್ಲಿ ಅಂತ್ಯಸAಸ್ಕಾರ ಮಾಡಿಕೊಳ್ಳುತ್ತಾರೆ. ಜಮೀನು ಇಲ್ಲದವರು ಎಲ್ಲಿ ಅಂತ್ಯಸAಸ್ಕಾರ ಮಾಡಬೇಕು ಎಂದು ಪ್ರತಿಭಟನಾಕಾರರು ಅಧಿಕಾರಿಗಳು ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಭೂಮಿಯಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ, ಅಂಗನವಾಡಿ, ಶಾಲೆಗೆ ಮೀಸಲಿಡಲಾಗಿದೆ ಆದರೆ ಉಳಿದ ಭೂಮಿಯಲ್ಲಿ ಆಶ್ರಯ ನಿವೇಶನ ಹಾಗೂ ಸ್ಮಶಾನಕ್ಕೆ ಭೂಮಿ ಮಂಜುರಾತಿ ಮಾಡಿ ಎಂದರೆ ಭೂಮಿ ಇಲ್ಲ ಎನ್ನುತ್ತಾರೆ, ಅಕ್ರಮವಾಗಿ ಸರಕಾರಿ ಭೂಮಿಯನ್ನು ಒತ್ತುವರಿ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಮನವಿ ನೀಡಿದರೆ ಕಂದಾಯ ಅಧಿಕಾರಿಗಳು, ಸರ್ವೆ ಹಾಗೂ ಗ್ರಾಮಲೆಕ್ಕಾಧಿರಿಗಳು ಸಾಬೂಬು ಹೇಳುತ್ತಾರೆ.
ಇದೇ ಸಂಧರ್ಭದಲ್ಲಿ ದೇವ್ಲನಾಯ್ಕ್, ದಿಗಂಬರ್‌ನಾಯ್ಕ್, ರಾಜನಾಯ್ಕ, ಜ್ಯೋತಿ, ರಂಗನಾಯ್ಕ, ಬಾಪೂಜಿ ನಾಯ್ಕ್, ಯುವ ಮುಖಂಡ ಅನಿಲ್ ನಾಯ್ಕ್, ರಮೇಶ್, ಗೌರಿಬಾಯಿ, ಗೀತಾ, ಪ್ರಮೀಳಾ, ರವಿ, ದೇವ್ಯಾನಾಯ್ಕ, ಸೇರಿದಂತೆ ಮಹಿಳೆಯರು ಹಾಗೂ ಗ್ರಾಮಸ್ಥರು ವನವಿ ನೀಡಿದ್ದಾರೆ.