ವಾಲ್ಮೀಕಿ ಜಾತ್ರೆಗೆ ಆಹ್ವಾನ ನೀಡಿದ..! ರಾಜನಹಳ್ಳಿ ಶ್ರೀ ವಾಲ್ಮೀಕಿ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು
ಚಳ್ಳಕೆರೆ : ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಪಟ್ಟಣದಲ್ಲಿ ವಾಲ್ಮೀಕಿ ಜಾತ್ರೆಯ ನಿಮಿತ್ತವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡರಾದ ಪ್ರಭಾಕರ ಮ್ಯಾಸನಾಯಕರು ಭಾಗವಹಿಸಿದರು.
ಈ ಸಭೆಯಲ್ಲಿ ಸಮಾಜದ ಗಣ್ಯರು ಹಾಗೂ ಹಿರಿಯರಾಗಿರುವ ಎತ್ನಟ್ಟಿ ಗೌಡರು, ಭಕ್ತರಾಮೇಗೌಡರು, ಯುವ ಮುಖಂಡರಾದ ಬೋರಸ್ವಾಮಿ, ಬಸವರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು