ಚಳ್ಳಕೆರೆ : ರಾಜ್ಯದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತುಹೊಗಿದ್ದಾರೆ, 2023ರ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಿಕ್ಕೆ ಬರುವುದು ನಿಶ್ಚಿತ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರದಮಲ್ಲಿ ಭಾಘವಹಿಸಿ ಮಾತನಾಡಿದರು, ರಾಜ್ಯದಲ್ಲಿ ಇಂತಹ ಸರಕಾರಗಳನ್ನು ಮನೆಗೆ ಕಳಿಸಲು ಮತದಾರರು ಈ ಭಾರಿ ತಿರ್ಮಾನ ಕೈಗೊಂಡಿದ್ದಾರೆ ಆದ್ದರಿಂದ ಚಳ್ಳಕೆರೆ ಕ್ಷೇತ್ರದಲ್ಲಿ ಕೂಡ ಈ ಭಾರಿ ಜೆಡಿಎಸ್ ಪಕ್ಷಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಒಕ್ಕೊರಲಿನಿಂದ ಸ್ವಯಂ ಪ್ರೇರಿತವಾಗಿ ಬಿಜೆಪಿ ಹಾಗೂ ಕಾಂಗ್ರೇಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಯಾಗುತ್ತಿದ್ದಾರೆ.
ಇನ್ನೂ ಬಿಜೆಪಿ ಪಕ್ಷದ ದುರಾಡಳಿತಕ್ಕೆ ರಾಜ್ಯದ ಜನತೆ ಹೈರಾಣಗಿದ್ದಾರೆ, ನಮ್ಮ ಜೆಡಿಎಸ್ ಪಕ್ಷವು ರೈತರ ಸಾಲ ಮನ್ನಾ ಹಾಗೂ ಜಾತಿ ಜಾತಿಯನ್ನು ಕೂಡಿಸಿ ಜಾತ್ಯಾತೀತ ಸರ್ಕಾರವನ್ನು ರಚಿಸಿ ರಾಜ್ಯದ ರೈತರಿಗೆ 160 ಕೋಟಿ ಚಿತ್ರದುರ್ಗ ಜಿಲ್ಲೆಗೆ ಸಾಲ ಮನ್ನಾ ಮಾಡಿದ್ದಾರೆ ರೈತರು ಸಂಕಷ್ಟದಲ್ಲಿದ್ದಾಗ ರೈತರ ಪರವಾಗಿ ಹೋರಾಟ ಮಾಡಿ ರೈತಪರ ಸರಕಾರ ನಡೆಸಿದರು ಎಂದರು.
ಇನ್ನೂ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ ಮಾತನಾಡಿ, ತಾಲೂಕಿನ ಜನತೆ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಅಧಿಕಾರಕ್ಕೆ ತರವು ವಿಶ್ವಾಸ ನಮಗಿದೆ, ಈಗಾಗಲೇ ಚಳ್ಳಕೆರೆ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ಬೇಟಿ ಮಾಡಿ ಮತದಾರರಿಗೆ ಪಕ್ಷದ ಸಿದ್ದಾಂತಗಳನ್ನು ಮನವರಿಕೆ ಮಾಡಿದೆ, ಆದೇ ರೀತಿಯಲ್ಲಿ ಮತದಾರರ ಒಲವು ಹೆಚ್ಚಾಗಿದೆ ಕಾಂಗ್ರೇಸ್ ಹಾಗೂ ಬಿಜೆಪಿ ದುರಾಡಳಿತ ಜನರ ಹೊಟ್ಟೆ ಮೇಲೆ ಬರೆ ಬಿದ್ದಿದೆ ಆದ್ದರಿಂದ ರೈತಪರ ಸರಕಾರ ಜೆಡಿಎಸ್‌ಗೆ ಬೆಂಬಲ ಕೋರಿದರು.
ಈದೇ ಸಂಧರ್ಭದಲ್ಲಿ ಕಾಂಗ್ರೇಸ್ ಪಕ್ಷವನ್ನು ತೊರೆದು ಜೆಡಿಎಸ್ ಬಾವುಡ ಹಿಡಿದ ಹಿರಿಯ ಮುಖಂಡ ಶಾಂತಕುಮಾರ್, ಸುನಿಲ್, ಬಸವರಾಜ್, ಪಾಪಣ್ಣ, ರಂಗಪ್ಪ, ರಂಗನಾಥ್, ಅರುಣಾ, ಸಿದ್ದು, ಅವಿನಾಷ್ ಇನ್ನೂ ಹಲವು ಮುಖಂಡರು ಎರಡು ರಾಷ್ಟಿçÃಯ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಗೊಂಡರು.
ಈದೇ ಸಂಧರ್ಭದಲ್ಲಿ ನಗರಸಭಾ ಸದಸ್ಯ ವಿ.ವೈ ಪ್ರಮೋದ್, ಸಿದ್ದಾರ್ಥ, ಇತರರು ಪಾಲ್ಗೊಂಡಿದ್ದರು.