ನಾಯಕನಹಟ್ಟಿ :: ಬರಪೀಡಿತ ಪ್ರದೇಶದಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿಗಳಲ್ಲಿ ಪಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಭಕ್ತ ರಾಮೇಗೌಡ ಹೇಳಿದ್ದಾರೆ.
ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ 2023ರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಪುರತನ ಕಾಲದಿಂದಲೂ ಹೊಸ ವರ್ಷವನ್ನು ಆಚರಿಸುತ್ತಿದ್ದೇವೆ ನಮ್ಮ ಹಿಂದೂ ಸಂಪ್ರದಾಯದAತೆ ಹೊಸ ವರ್ಷವೆಂದರೆ ಯುಗಾದಿ ಹಬ್ಬ ಎಂಬುದು ನಮ್ಮ ಪೂರ್ವಜರ ನಂಬಿಕೆ 2023ರ ಹೊಸ ವರ್ಷವೂ ನಾಡಿನ ಜನತೆಗೆ ಉತ್ತಮ ಮಳೆ ಬೆಳೆ ಸಮೃದ್ಧಿಯಾಗಿ ಆಗಲೇ ವಿದ್ಯಾರ್ಥಿಗಳು ಒಂದು ವರ್ಷದ ಅವಧಿಯಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಠ್ಯಪುಸ್ತಕಗಳು ಸೇರಿದಂತೆ ಉತ್ತಮವಾಗಿ ಓದಿ ತಮ್ಮ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಇದೆ ವೇಳೆ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರ್ ಸ್ವಾಮಿ ಮಾತನಾಡಿ ಭಕ್ತಿ ರಾಮೇಗೌಡರು ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ದಂಡಾಧಿಕಾರಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದರು ಅವರ ನಮ್ಮ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಬಡ ಮಕ್ಕಳಿಗೆ ದಾರಿದೀಪವಾಗಿದ್ದಾರೆ ಪ್ರತಿಯೊಬ್ಬ ವಿದ್ಯಾರ್ಥಿಯು 2022 ರನ್ನ ಕಳೆದು 2023 ಕ್ಕೆ ಕಾಲ ಇಟ್ಟಿದ್ದೀರಾ ಕಳೆದು ಹೋದ ದಿನಗಳನ್ನು ಮರೆತು ಹೊಸ ವರ್ಷ ಹೊಸ ದಿನದಿಂದ ತಮ್ಮ ವಿದ್ಯಾಭ್ಯಾಸದ ಕಡೆ ಇರಬೇಕು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವಂತೆ ಉತ್ತಮವಾಗಿ ವಿದ್ಯಾಭ್ಯಾಸವನ್ನು ಕುರಿತು ಸಮಾಜ ಸೇವೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಮುಂಚೂಣಿಯಲ್ಲಿ ಇರಬೇಕು ಎಂದರು
ಇದೇ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಡಿ ಎಸ್ ರಾಜೇಶ್ವರಿ, ಪ್ರಾಂಶುಪಾಲ ಎಚ್ ಭೀಮಣ್ಣ, ಬಂಗಾರಪ್ಪನಾಯಕನಹಟ್ಟಿ, ಅಬ್ಬೇನಹಳ್ಳಿ ಪ್ರಕಾಶ್,
ಶಿವತಿಪ್ಪೇಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗದಳ್ಳಿ ಬಸವರಾಜ್
ಗುಂತಕೋಲಮ್ಮನಹಳ್ಳಿ, ಮಲ್ಲೇಬೋರೆನಹಟ್ಟಿ ಪಾಲಯ್ಯ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು