ಚಳ್ಳಕೆರೆ: ಕನ್ನಡ ನಾಡಿನ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಅನೇಕ ಸಾಹಿತಿಗಳು ಹೋರಾಟಗಾರರು ಮತ್ತು ಕನ್ನಡ ನಾಡಿನ ಅಭಿಮಾನಿಗಳು ಬಹಳಷ್ಟು ಶ್ರಮ ವಹಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಅಭಿಪ್ರಾಯ ಪಟ್ಟರು
ನಗರದ ಎಚ್‌ಟಿಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ 119ನೇ ಕುವೆಂಪು ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಕುವೆಂಪುರವರ ಪ್ರತಿ ಕೃತಿಯಲ್ಲೂ ಕನ್ನಡ ನಾಡಿನ ಸಂಸ್ಕೃತಿಯ ವೈಶಿಷ್ಟ್ಯತೆ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಬಹುದು
ಅವರಲ್ಲಿ ಕುವೆಂಪು ಅಗ್ರಗಣ್ಯರಾಗಿದ್ದಾರೆ ಕನ್ನಡ ಭಾಷೆಯ ಸಾಹಿತ್ಯಕ್ಕೆ ಸಲ್ಲಿಸಿದ ಅವರ ಈ ಕೊಡುಗೆಯಿಂದ ದೇಶ ಹಾಗೂ ರಾಜ್ಯ ಪ್ರಶಸ್ತಿಗಳು ಹರಸಿ ಬಂದವು ನಮ್ಮ ನಾಡಿನ ಸಾಂಸ್ಕೃತಿಕ ನಾಡಿಮಿಡಿತವನ್ನು ಅಚ್ಚುಕಟ್ಟಾಗಿ ಅರಿತವರಾಗಿದ್ದರು ವಿದ್ಯಾರ್ಥಿಗಳು ಸಾಹಿತ್ಯವನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಉತ್ತಮಪಡಿಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆAದು ಕರೆ ನೀಡಿದರು.
ಶಾಲೆಯ ಮುಖ್ಯಶಿಕ್ಷಕ ಡಿಕೆ.ಮಾಧವ್ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯವು ಎಲ್ಲರಿಗೂ ಒಲಿಯುವುದಿಲ್ಲ ಸಾಹಿತ್ಯ ರಚನೆಗೆ ಭಾಷೆಯ ಮೇಲಿನ ಹಿಡಿತ ಪ್ರಮುಖವಾಗುತ್ತದೆ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬರೆಯಲು ಕಲಿತಾಗ ಮಾತ್ರ ಸಾಹಿತ್ಯದ ಒಲವು ಬೆಳೆಯಲು ಸಾಧ್ಯವಾಗುತ್ತದೆ ಕುವೆಂಪುರವರ ಪುಸ್ತಕಗಳು ಕನ್ನಡ ಭಾಷೆ ಬಾರದಿದ್ದ ವ್ಯಕ್ತಿಗೆ ಅರ್ಥವಾಗುವಂತಹ ಸಾಹಿತ್ಯವನ್ನು ರಚನೆ ಮಾಡಿದ ಮಹಾನ್ ಮೇಧಾವಿ ಕವಿ ಎಂದು ಬಣ್ಣಿಸಿದರು.
ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜ್ ಕುಮಾರ್ ಮಾತನಾಡಿ ಕುವೆಂಪುರವರು ತಮ್ಮ ಮನೆಯ ಸುತ್ತಮುತ್ತಲಿನ ದಟ್ಟ ಕಾಡಿನ ನಡುವೆ ನಿಸರ್ಗದ ಮಡಿಲಿನಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದವರು ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳು ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದರು ಸಹ ಶಿಕ್ಷಣದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ ಸಾಧನೆಗೆ ಕುವೆಂಪುರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಉತ್ತಮ ಕುವೆಂಪುರವರ ನಿವಾಸವನ್ನು ಸರ್ಕಾರ ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಸ್ಮಾರಕವನ್ನುನ್ನಾಗಿಸಿದೆ ಇದು ಸಾಹಿತ್ಯ ವಲಯಕ್ಕೆ ವಿಶ್ವವಿದ್ಯಾನಿಲಯದಂತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಕುವೆಂಪು ರವರು ರಚಿಸಿದ ನಾಡಗೀತೆ ರೈತ ಗೀತೆ ನಾಟಕಗಳಿಗೆ ಆಕರ್ಷಕ ನೃತ್ಯರೂಪಕ ನೀಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿಎಲ್.ಉಮಾ, ಆರ್ ಜಿ.ಶಿವಣ್ಣ, ಪ್ರದೀಪ್, ಪೂರ್ಣಿಮಾ, ಸುಜಾತ, ಕುಸುಮಾವತಿ, ನಾಗರಾಜ್ ಶಿವಕರ್ತಿ ಪ್ರಕಾಶ,. ಸೇರಿದಂತೆ ವಿದ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು.

Namma Challakere Local News
error: Content is protected !!