ನಾಯಕನಹಟ್ಟಿ:: ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಸಮಾಜ ಸೇವೆ ಅತಿ ಮುಖ್ಯವಾದದ್ದು ಪ್ರಶಸ್ತಿಗಳು ಮತ್ತು ಪದಕ ಹುಡುಕಿಕೊಂಡು ಬರುತ್ತದೆ ಎಂದು ಪಿಎಸ್ಐ ಜೆ ಶಿವರಾಜ್ ಹೇಳಿದರು.
ಅವರು ಪಟ್ಟಣದ ಯಾತ್ರಿ ನಿವಾಸದಲ್ಲಿ ನಾಯಕನಹಟ್ಟಿ ಗೃಹ ರಕ್ಷಕ ದಳ ಘಟಕ ವತಿಯಿಂದ.
ಮುಖ್ಯಮಂತ್ರಿ ಪದಕ ಮತ್ತು ರಾಷ್ಟ್ರಪತಿ ಪದಕ ಪಡೆದಂತಹ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ್ದಾರೆ.
ತುರ್ತು ಸಂದರ್ಭದಲ್ಲಿ ಕರೋನ ಭೂಕಂಪ ಚುನಾವಣೆ ಜಾತ್ರೆ ಸಮಾರಂಭಗಳಲ್ಲಿ ಗೃಹರಕ್ಷಕ ದಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.
ಗೃಹ ರಕ್ಷಕ ದಳದ ಅಧಿಕಾರಿ ನೌಕರರು ತಮ್ಮ ಸಂಸಾರವನ್ನು ನಿರ್ಲಕ್ಷಿಸಿಕೂಡದು ಸರ್ಕಾರಿ ಕೆಲಸ ಮಾಡುವುದರ ಜೊತೆಗೆ ತಮ್ಮ ಕುಟುಂಬಗಳನ್ನು ಕೂಡ ವ್ಯವಸ್ಥಿತ ರೀತಿಯಲ್ಲಿ ಸಲಹಾ ಬೇಕೆಂದು ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಗೃಹರಕ್ಷಕ ದಳದ ಜಿಲ್ಲಾ ಕಾಮಾಂಡೆಟ್ ಸಂಧ್ಯಾ ಮಾತನಾಡಿ ಗೃಹರಕ್ಷಕ ದಳದ ಸಿಬ್ಬಂದಿಗಳು ಹತ್ತು ಹಲವು ಇಲಾಖೆಗಳಲ್ಲಿ ಭಾಗಿಯಾಗಿ ಕೆಲಸ ನಿರ್ವಹಿಸುತ್ತಾರೆ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಮಾಡುತ್ತಾರೆ ಆ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳಲ್ಲಿ ಹೊಂದಿಕೊಳ್ಳುತ್ತಾರೆ ಈ ಒಂದು ವಿಶಿಷ್ಟ ಗುಣ ಗೃಹರಕ್ಷಕ ದಳದ ನೌಕರರಿಗೆ ಇದೆ ತಮ್ಮ ಆರೋಗ್ಯ ಮತ್ತು ದೇಹದಾಢ್ಯದ ಕಡೆ ಗಮನ ನೀಡಬೇಕು ಮುಂಬರುವ ದಿನಗಳಲ್ಲಿ ಕೋವಿಡ್ ಮುನ್ಸೂಚನೆ ಇದ್ದು ಸಿದ್ಧವಾಗಬೇಕೆಂದು ಹೇಳಿದರು.
ಮುಖ್ಯಮಂತ್ರಿ ಪದಕ ಪಡೆದ ಗೃಹರಕ್ಷಕ ದಳದ ನೌಕರರಾದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು ಶ್ರೀಮತಿ ಸಂಧ್ಯಾ ಚಿತ್ರದುರ್ಗ, ನಾಯಕನಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಜೆ ಶಿವರಾಜ್, ಜಿಲ್ಲಾ ಬೋಧಕರು ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿ ಪದಕ ಪುರಸ್ಕೃತರು ಎಚ್ ತಿಪ್ಪೇಸ್ವಾಮಿ, ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿ ಪದಕ ಪುರಸ್ಕೃತರು ಕೆ ಜಗನ್ನಾಥ್ ಪಿಎಲ್‌ಸಿ ಚಳ್ಳಕೆರೆ ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿ ಪದಕ ಪುರಸ್ಕೃತರು ಜಿ ಹನುಮಂತಪ್ಪ ಪಿ ಎಲ್ ಸಿ ಮೊಳಕಾಲ್ಮೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಪತ್ರಕರ್ತ ಕೆ ಟಿ ಓಬಳೇಶ್ ನಲಗೇತನಹಟ್ಟಿ, ನಿವೃತ್ತಿ ಎ ಆರ್ ಎಸ್ಐ ಮೃತ್ಯುಂಜಯ, ಸಿ ಕಾಂತರಾಜ್ ಘಟಕ ಅಧಿಕಾರಿಗಳು ಚಿತ್ರದುರ್ಗ, ಸನ್ಮಾನಿಸಲಾಯಿತು.
ಇದೆ ವೇಳೆ ನಾಯಕನಹಟ್ಟಿ ಘಟಕ ಅಧಿಕಾರಿ ವೈ ಬಿ ತಿಪ್ಪೇಸ್ವಾಮಿ, ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು