ಚಳ್ಳಕೆರೆ : ಸರ್ಕಾರಿ ಜಮೀನಿನ ಒತ್ತುವರಿ ತೆರವು ಮತ್ತು ಸರ್ಕಾರಿ ಜಮೀನಿನ ಅಳತೆಗೆ ಯಾವುದೇ ಸಾರ್ವಜನಿಕರು ಅಡ್ಡಿಪಡಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು
ಅವರು ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಹೋಬನಹಳ್ಳಿ ಗ್ರಾಮದ ಸರ್ವೆ ನಂಬರ್ 31ರಲ್ಲಿ ಆರು ಎಕರೆ 16 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ನೀಡುವಂತ ಪೈಪ್‌ಲೈನ್ ಮತ್ತು ದಾರಿಗೆ ನಿರಂತರವಾಗಿ ಅಡ್ಡಿಪಡಿಸಿದ್ದು ಇದನ್ನು ಅಳತೆ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ

ಇಂದು ಸರ್ವೆ ಅಧಿಕಾರಿಗಳು, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಅಳತೆ ಕಾರ್ಯವನ್ನು ಮಾಡಲು ಮುಂದಾದಾಗ ಕೆಲವು ಒತ್ತುವರಿದಾರರು ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದರು ಎನ್ನಲಾಗಿದೆ, ಆದರೆ ಪೊಲೀಸ್ ಸಿಬ್ಬಂದಿಗಳು ಸಹಕಾರದಿಂದ ಸ್ಥಳಕ್ಕೆ ಆಗಮಿಸಿ ಒತ್ತುವರಿ ಜಮೀನನ್ನು ವಶಕ್ಕೆ ಪಡೆದ ಅವರು ಸುಮಾರು 6ಎಕರೆ 12 ಗುಂಟೆ ಸರ್ಕಾರಿ ಜಮೀನನ್ನು ಸಂಪೂರ್ಣವಾಗಿ ಸರ್ವೆ ಮಾಡಿಸಿ ಸರ್ಕಾರಿ ಸ್ವಾಮ್ಯದ ಗೋಮಳ ಕೆರೆ, ಕುಂಟೆ ರಾಜಕಾಲುವೆ ಇವುಗಳನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡಕೂಡದು ಮುಂದಿನ ದಿನಗಳಲ್ಲಿ ಉದ್ದೇಶಿತ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೈಪ್‌ಲೈನ್ ದಾರಿ ಮುಂತಾದ ಬಳಕೆಗೆ ಯಾರೂ ಕೂಡ ಅಡ್ಡಿ ಮಾಡಕೂಡದು ಎಂದು ಮನವೋಲಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕ ಸಮೀವುಲ್ಲಾ, ಪೊಲೀಸ್ ಉಪನಿರೀಕ್ಷಕ ಸತೀಶ್‌ನಾಯ್ಕ, ಬಸವರಾಜು, ರಾಜಸ್ವನಿರಿಕ್ಷರಾದ ತಿಪ್ಪೇಸ್ವಾಮಿ, ಸರ್ವೆಯರ್ ಪ್ರಸನ್ನ, ಸರ್ವೇ ಸೂಪರ್‌ಡೆಂಟ್ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು

Namma Challakere Local News
error: Content is protected !!