ಚಳ್ಳಕೆರೆ : ನಾನು ಕೂಡ ಬಿಜೆಪಿ ಪಕ್ಷದಿಂದ ಸ್ವರ್ಧೆ ಮಾಡುತ್ತೆನೆ, ನಾನು ಕಳೆದ ಬಾರಿ ಅತೀ ಕಡಿಮೆ ಅಂತರದಿAದ ಪರಾಜಿತಗೊಂಡಿದ್ದೆನೆ ಈ ಬಾರಿ ಮತದಾರರ ಆಹ್ವಾನದ ಮೇರೆಗೆ ಚಳ್ಳಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಚಿಸಿದ್ದೆನೆ ಎಂದು ಚಿತ್ರನಟ ಮಾಜಿ ಲೋಕಸಬಾ ಸದಸ್ಯರಾದ ಶಶಿಕುಮಾರ್ ಹೇಳಿದ್ದಾರೆ.
ಅವರು ನಗರದ ಖಾಸಗಿ ಮನೆಯೊಂದರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಈಗಾಗಲೇ ಮತದಾರರ ಸಂಪರ್ಕದಲ್ಲಿ ನಿರಂತರವಾಗಿ ಇದ್ದೆನೆ, ಕಳೆದ ಸಂಸದ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ಚಳ್ಳಕೆರೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೆನೆ, ಆದ್ದರಿಂದ ಈ ಬಾರಿ ಮತದಾರರ ನನ್ನನ್ನು ಕೈ ಹಿಡಿಯುವ ಭರವಸೆ ನನಗಿದೆ, ಆದ್ದರಿಂದ ನಮ್ಮ ಪಕ್ಷದ ವರಿಷ್ಠರ ನಿಲುವಿನಂತೆ ಮೊಳಕಾಲ್ಮುರು ಹಾಗೂ ಚಳ್ಳಕೆರೆ ಕ್ಷೇತ್ರದಲ್ಲಿ ಎರಡು ಕಡೆ ಎಲ್ಲಿಯಾದರೂ ಅವಕಾಶ ಕೊಟ್ಟರೆ ಸ್ಪರ್ಧಿಸಲು ಸಿದ್ದನಿದ್ದೆನೆ ಎನ್ನುತ್ತಾರೆ.