ಚಳ್ಳಕೆರೆ : ರಸ್ತೆ ಬದಿಯಲ್ಲಿ ಕನಿಷ್ಠ ಜೀವನ ನಡೆಸುವ ಬೀದಿ ಬದಿಯ ವ್ಯಾರಸ್ಥರಿಗೆ ತರಬೇತಿ ಅನಿವಾರ್ಯ ಅಂತಹ ತರಬೇತಿ ಡೇನಲ್ಮ್ ಯೋಜನೆಯಡಿ ನೀಡುತ್ತಿರುವುದು ಪ್ರಯೋಜನಕಾರಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬೀದಿ ಬಿದಿ ವ್ಯಾಪರಸ್ಥರಿಗೆ ಆಯೋಜಿಸಿದ್ದ ಸಾಮಾರ್ಥ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕರು ತಮ್ಮ ನಿತ್ಯದ ಜೀವನ ನಡೆಸಲು ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಪುಟ್ ಬಾತ್ ಮೇಲೆ ನಿತ್ಯದ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ, ಇಂತಹವರಿಗೆ ಸಾಮಾರ್ಥ್ಯಾಭಿವೃದ್ದಿ ತರಬೇತಿ ಅನಿವಾರ್ಯವಾಗಿ ಅಗತ್ಯವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಂಯೋಜಕಿ ಸೌಮ್ಯ ಮಾಧ್ಯಮದೊಂದಿಗೆ ಮಾತನಾಡಿ,
ಇನ್ನೂ ಸ್ಥಳದಲ್ಲಿ ಬಸವರಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸೂರ್ಯ ನಾರಾಯಣನಾಯ್ಕ್, ಸಮುದಾಯ ಸಂಘಟಕರಾದ ನಾಗರತ್ನಮ್ಮ, ಪಿ.ಬಸಣ್ಣ, ಆರೋಗ್ಯ ನಿರೀಕ್ಷರಾದ ರುದ್ರಮುನಿ, ಕಚೇರಿ ಸಿಬ್ಬಂದಿಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಹಾಜರಿದ್ದರು