ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ :
2023ರ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷದ ಮುಖಂಡರು, ಸಂಭಾವ್ಯ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಈಡೀ ಕ್ಷೇತ್ರದ ತುಂಬೆಲ್ಲಾ ಪ್ರದಕ್ಷಿಣೆ ಹಾಕುವುದು ಕಂಡು ಬರುತ್ತಿದೆ.
ಅದರಂತೆ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟ ಜೆಡಿಎಸ್‌ನ ಅಭ್ಯರ್ಥಿ ಎಂ.ರವೀಶ್‌ಕುಮಾರ್, ಕಳೆದ2018 ಚುನಾವಣೆಯಲ್ಲಿ ಕಡಿಮೆ ಅಂತರದಿAದ ಸೋಲನುಂಡ ಅವರು, ಈಡೀ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಪಡೆಯುವುದರ ಮೂಲಕ ಹೇಗಾದರೂ ಮಾಡಿ 2023ರ ಚುನಾವಣೆಯಲ್ಲಿ ಜೆಡಿಎಸ್‌ನ ತೆನೆ ಗಟ್ಟಿಗೊಳಿಸಬೇಕು ಎಂದು ಪಣತೊಟ್ಟ ಅವರು ಈಗಾಗಲೇ ಮತದಾರರ ಮನಸ್ಸಲ್ಲಿ ಮನೆ ಮಾಡಿದ್ದಾರೆ.
ಅದರಂತೆ ಈಡೀ ಕ್ಷೇತ್ರದಲ್ಲಿ ಪುಲ್ ರೌಂಡ್ಸ್ ಹೊಡೆಯುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಎಲ್ಲೆ ಸಮಸ್ಯೆ ಕಂಡು ಬಂದರು ಅಲ್ಲಿ ಸಾರ್ವಜನಿಕರ ಪರವಾಗಿ ನಿಂತು ಅವರ ಕಷ್ಟಕ್ಕೆ ಸಂದ್ಪಿಸುವ ಮೂಲಕ ಕಣದಲ್ಲಿ ತಮ್ಮದೇ ಆದ ವರ್ಚಸ್ಸು ಮೂಲಕ ಓಡಾಡುತ್ತಿದ್ದಾರೆ. ಅದರಂತೆ ಕಾಂಗ್ರೇಸ್ ವಶದಲ್ಲಿರುವ ಕ್ಷೇತ್ರವನ್ನು ಮಣಿಸಲು ಕಾಂಗ್ರೇಸ್ ಮುಖಂಡರಿಗೆ ಮಣಿಹಾಕಿದ ಜೆಡಿಎಸ್ ಮುಖಂಡರು ತಮ್ಮ ಪಕ್ಷಕ್ಕೆ ಮುಖಂಡರನ್ನು ಸೇರಿಸಿಕೊಳ್ಳಲು ಹೊಂಚು ಹಾಕಿ ಜೆಡಿಎಸ್ ಪಕ್ಷಕ್ಕೆ ವಾರಕ್ಕೊಂದು ಹೋಬಳಿಯಂತೆ ಆಯ್ಕೆ ಮಾಡಿಕೊಂಡು ಪ್ರಮುಖ ಮುಖಂಡರನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಅಭ್ಯರ್ಥಿ ಹುಡುಕಾಟದಲ್ಲಿ ಕಾಲ ಕಳೆಯುವ ಬಿಜೆಪಿ ಪಕ್ಷದಲ್ಲಿ ಯಾವುದೇ ಅಭ್ಯರ್ಥಿಯು ಗಟ್ಟಿಯಾಗಿ ನಿಲ್ಲದೆ ವರಿಷ್ಠರ ನಿಲುವಿನಂತೆ ಟಿಕೆಟ್ ಪಿಕ್ಸು ಮಾಡುವವರೆಗೂ ಕಾದು ನೊಡುವ ತಂತ್ರದಲ್ಲಿ ಕೆಲವು ಆಂಕಾಕ್ಷಿಗಳು ಬಲವಾಗಿ ನಿಲ್ಲದೆ ಕೇವಲ ಬಂದೇ ಪುಟ್ಟ ಹೋದೆ ಪುಟ್ಟ ಎಂಬ ಮಾತಿನಂತೆ ನಿದ್ರೆಯಲ್ಲಿದ್ದಾರೆ, ಇಂತಹ ಸಮಯವನ್ನು ಕಾಯುತ್ತಿರುವ ಜೆಡಿಎಸ್ ಮುಖಂಡರು, ಸಂಘಟನೆಯನ್ನು ಬಲಗೊಳಿಸಲು ಇದೇ ಸದಾವಕಾಶವನ್ನು ಅಸ್ತçವನ್ನಾಗಿ ಬಳಸಿ ಕ್ಷೇತ್ರದ ಸುಮಾರು ಗ್ರಾಮಗಳಲ್ಲಿ ಬಿಜೆಪಿ ಮುಖಂಡರನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಳ್ಳುತಿದ್ದಾರೆ. ಈಗೇ ಈಡೀ ಕ್ಷೇತ್ರದ ನಾಲ್ಕು ಹೊಬಳಿಯಲ್ಲಿ ಮೊದಲನೇ ಹಂತದಲ್ಲಿ ಸೋಲನುಂಡ ಜೆಡಿಎಸ್ ಈ ಭಾರಿ ಗೆಲುವಿಗಾಗಿ ನಿದ್ರೆಯನ್ನು ತ್ಯಜಿಸಿದಂತಿದೆ ಎನ್ನಲಾಗಿದೆ.

ಹತ್ತು ವರ್ಷದ ಸಾಧನೆ ಈ ಬಾರಿ ಫಲಿಸುತ್ತಾ..?
ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳ ಕಾಂಗ್ರೆಸ್‌ನ ಸುರ್ದೀಘ ಆಡಳಿತ ಈ ಭಾರಿ ಜಯಬೇರಿಸಿ ಹ್ಯಾಟ್ರೀಕ್ ಹೊಡೆದು ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಗಿಟ್ಟಿಸಿಕೊಂಡು ಇನ್ನೂ ಕ್ಷೇತ್ರವನ್ನು ಈಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಲು ಪಣತೊಟ್ಟ ಶಾಸಕರು ಹೇಗದಾರೂ ಮಾಡಿ ಈ ಬಾರಿ ಕ್ಷೇತ್ರವನ್ನು ಮತ್ತೊಂಮ್ಮೆ ಕಾಂಗ್ರೇಸ್ ವಶಕ್ಕೆ ಪಡೆದುಕೊಳ್ಳಲು ನಿತ್ಯವೂ ಗ್ರಾಮಗಳ ಪ್ರವಾಸದ ಮೂಲಕ ಸಾರ್ವಜನಿಕರ ಕುಂದು ಕೊರತೆಗಳ ನೀಗಿಸುವುದರ ಮೂಲಕ ಮತದಾರ ಮನಸ್ಸಲ್ಲಿ ಉಳಿದಿದ್ದಾರೆ. ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕಳೆದ 2018ರಲ್ಲಿ ಈ ಇಬ್ಬರು ತಮ್ಮ ಕಸರತ್ತು ನಡೆಸಿದ್ದಾರೆ ಆದರೆ ಈ ಬಾರಿ ಹಾಲಿ ಶಾಸಕರ ಎದುರು ತಮ್ಮದೇ ಆದ ವರ್ಚಸ್ಸು ಇರುವ ಅಭ್ಯರ್ಥಿಯನ್ನು ಬಿಜೆಪಿಯಲ್ಲಿ ತಂದರೆ ಮಾತ್ರ ಕೊಂಚ ಏರುಪೇರು ಹಾಗುವುದು ಕಾಣಬಹುದು, ಒಟ್ಟಾರೆ ಈ ಬಾರಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಜಿದ್ದಾಜಿದ್ದಿ ಪೈಟ್ ಬಿಳುವುದು ಸತ್ಯ.
ಅಭ್ಯರ್ಥಿ ಹುಡುಕಾಟದಲ್ಲಿ ಕಾಲ ಕಳೆಯುವ ಬಿಜೆಪಿ..!!
ಅಕ್ಷರಶಾಃ ಸತ್ಯ ಚುನಾವಣೆ ಕಣ ಅತ್ತ ರಂಗೇರುತ್ತಿದೆ ಆದರೆ ಕ್ಷೇತ್ರದಲ್ಲಿ ಬಿಜೆಪಿ ಮಾತ್ರ ಹಾಗೊಂದು ಇಗೋಂದು ಸಭೆ ಸಮಾರಂಭ ಮಾಡುವ ಮೂಲಕ ಸ್ಥಿರವಿಲ್ಲದೆ, ಅಭ್ಯರ್ಥಿಗಳ ಆರ್ಥಿಕತೆಯ ಮೇಲೆ ಹುಡುಕಾಟ ನಡೆಸುತ್ತಿದೆ. ಇನ್ನೂ ಸುಮಾರು ಅರ್ಧ ಡಜನ್‌ಗೂ ಹೆಚ್ಚಿನ ಆಂಕಾಕ್ಷಿಗಳು ಕಳೆದ ಮುಖ್ಯಮಂತ್ರಿ ಸಮಾರಂಭದಲ್ಲಿ ಕಂಡರು, ಆದರೆ ಪ್ರಸ್ತುತ ಕಾಣೆಯಾಗಿದ್ದಾರೆ. ಆದರೆ ನೌಕರಿಯಲ್ಲಿರುವ ಅಧಿಕಾರಿಯೊಬ್ಬರು ಮಾತ್ರ ನಿತ್ಯವೂ ಜನರ ಒಡನಾಟ ಬೇಳೆಸುತ್ತಿದ್ದಾರೆ, ಜನರ ಕಷ್ಟಗಳಿಗೆ ಸ್ಪಂಧಿಸುವ ಮೂಲಕ ಹತ್ತಿರವಾಗುತ್ತಿದ್ದಾರೆ, ಒಂದು ಹಂತದ ಸಮೀಕ್ಷೆ ಪ್ರಕಾರ ವರಿಷ್ಠರ ನಿಲುವು ಕೂಡ ಇದೇ ನೌಕರಿಯಲ್ಲಿರುವ ಅಧಿಕಾರಿಗೆ ಟಿಕೆಟ್ ನೀಡುವ ಮುನ್ಸೂಚನೆ ಕೊಟ್ಟಂತೆ ಈ ಅಧಿಕಾರಿಯೊಬ್ಬರು ನಿತ್ಯವೂ ಬಿಡುವಿಲ್ಲದೆ ಕೆಲಸದಲ್ಲಿ ತೊಡಗುತ್ತಿದ್ದಾರೆ ಈ ಎಲ್ಲಾ ಬೆಳೆವಣಿಗೆಗಳು ಚಳ್ಳಕೆರೆ ಕ್ಷೇತ್ರದಲ್ಲಿ ಕಂಡರೆ ಮತದಾರ ಮಾತ್ರ ಅಭಿವೃದ್ದಿ ಪಥದತ್ತ ಕೊಂಡುಯ್ಯುವ ಅಭ್ಯರ್ಥಿಗೆ ಮಣಿಹಾಕುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಚುನಾವಣೆ ಅಕಾಡ ಜನವರಿಯಲ್ಲಿ ಗರಿಗೆದರಲಿದೆ ಎನ್ನಲಾಗಿದೆ, ಒಟ್ಟಾರೆ ಈ ಭಾರಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಮೂರು ಪಕ್ಷಗಳ ಜಿದ್ದಾಜಿದ್ದಿ ಪೈಟ್ ಗೆ ಸಜ್ಜಾಗಿದೆ.

Namma Challakere Local News
error: Content is protected !!