ಚಳ್ಳಕೆರೆ : ರೈತರು ಬೆಳೆ ಪರಿಹಾರಕ್ಕೆ ಸಂಬAಧಿಸಿದAತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಮಲ್ಲೂರಹಳ್ಳಿ, ನಾಯಕನಹಟ್ಟಿ, ಗೌರಸಮುದ್ರ ಮತ್ತು ಓಬನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ರೈತರಗಳೊಂದಿಗೆ ಸಂವಾದ ನಡೆಸಿದ ಅವರು, ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲೇ ಎರಡನೇ ದೊಡ್ಡ ತಾಲೂಕು, ಸುಮಾರು 46,000 ಎಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಬೆಳೆ ಪರಿಹಾರಕ್ಕೆ ಸಂಬAಧಿಸಿದAತೆ ಆನ್ಲೈನ್‌ನಲ್ಲಿ ಬೆಳೆ ಪರಿಹಾರ ಸಾಫ್ಟ್ವೇರ್‌ನಲ್ಲಿ ಡಾಟಾ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಸಂಬAಧಿಸಿದ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿ ರೈತರ ಬೆಳೆ ಪರಿಹಾರಕ್ಕೆ ಸಂಬAಧಿಸಿದ ಯಾವುದೇ ಪ್ರಕರಣ ಕೈ ತಪ್ಪದಂತೆ ನಿಗಾ ವಹಿಸಬೇಕೆಂದು ಸೂಚನೆ ನೀಡಿದ್ದಾರೆ
ಅದರಂತೆ ಈಗಾಗಲೇ ತೋಟಗಾರಿಕಾ ಬೆಳೆಗಳಿಗೆ ಸಂಬAಧಿಸಿದAತೆ ಶೇಕಡ 90ರಷ್ಟು ರೈತರಿಗೆ ಪರಿಹಾರ ಪಾವತಿಸಲಾಗಿದೆ ಉಳಿದಂತ 10% ಪರಿಹಾರ ಕೆಲವು ನ್ಯೂನತೆಗಳನ್ನು ಸರಿಪಡಿಸಿದ ನಂತರ ಪಾವತಿಸಲಾಗುತ್ತದೆ .

ಉಳಿದಂತೆ ಕೃಷಿ ಬೆಳೆಗಳಿಗೆ ಸಂಬAಧಿಸಿದAತ ಪರಿಹಾರ ಒಂದು ವಾರದಲ್ಲಿ ರೈತರ ಖಾತೆಗಳಿಗೆ ಜಮಾ ಆಗುವ ನಿರೀಕ್ಷೆ ಇದೆ ಆದ್ದರಿಂದ ಯಾವುದೇ ರೈತರು ತಮ್ಮ ಬದುಕನ್ನು ಬಿಟ್ಟು ಜಿಲ್ಲಾಧಿಕಾರಿಗಳ ಕಚೇರಿ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ತಾಲೂಕ ಕಚೇರಿಗೆ ಅಲೆದಾಡುವುದನ್ನು ನಿಲ್ಲಿಸಬೇಕು ನಿಮ್ಮದಿ ಬದುಕು ಕಟ್ಟಿಕೊಳ್ಳಬೇಕು ಸರ್ಕಾರದಿಂದ ದೊರೆಯುವಂತಹ ಎಲ್ಲಾ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಎಲ್ಲ ಅಧಿಕಾರಿ ನೌಕರರುಗಳು ರೈತರ ಬದುಕಿಗೆ ನೆರವಾಗುವಂತಹ ಎಲ್ಲ ಕೆಲಸ ಕಾರ್ಯಗಳು ಕಾಲಮಿತಿಯೊಳಗೆ ಮಾಡಿಕೊಡಲಾಗುವುದೆಂದು ರೈತರಲ್ಲಿ ಮನವಿ ಮಾಡಿದರು.

Namma Challakere Local News
error: Content is protected !!