ಚಳ್ಳಕೆರೆ : ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜಲಜೀವನ್ ಮಿಷನ್ ಯೋಜನೆ ವರದಾನವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಕಾಮಗಾರಿಯ ಭೂಮಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು
ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ರವರು ಗ್ರಾಮೀಣ ಪ್ರದೇಶ ಜನರಿಗೆ ಶುದ್ಧ ನೀರಿನ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

ಈ ವೇಳೆ ಗುತ್ತಿಗೆದಾರ ಜಗದೀಶ್ ರುಕುಂಪೂರ ಮಾತನಾಡಿ 2022 23ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವವಾದ ಯೋಜನೆ ಜಲಜೀವನ್ ಮಿಷನ್ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಎಸ್ ಮಂಜಣ್ಣ ರವರಿಗೆ ಉಪಾಧ್ಯಕ್ಷರಿಗೆ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಕಾಮಗಾರಿ ನಡೆಸಲು ಸಹಕರಿಸಬೇಕು ಎಂದು ಜಗದೀಶ್ ರುಕುಂಪೂರ, ರವರು ಮನವಿ ಮಾಡಿಕೊಂಡರು.
ನAತರ ಡಿಎಸ್ಎಸ್ ಜಿಲ್ಲಾ ಸಂಚಾಲಕ ಜಿ ಬಿ ತಿಪ್ಪೇಸ್ವಾಮಿ ಹಾಗೂ ರಾಮಸಾಗರ ಬಿಜೆಪಿ ಮುಖಂಡ ಸಣ್ಣ ಪಾಲಯ್ಯ ರವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದ್ದಾರೆ

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪಾಲಮ್ಮ ಜಿ ಬೋರಯ್ಯ. ಸದಸ್ಯರಾದ ಬಸಕ್ಕ ತಿಪ್ಪೇಸ್ವಾಮಿ, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಜಿ ಬಿ ತಿಪ್ಪೇಸ್ವಾಮಿ, ರಾಮಸಾಗರ ಬಿಜೆಪಿ ಮುಖಂಡ ಸಣ್ಣ ಪಾಲಯ್ಯ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಗಿಣಿಯರ್ ತಿಪ್ಪೇಶ್, ಜಲಜೀವನ ಮಿಷನ ಗುತ್ತಿಗೆದಾರರಾದ ಜಗದೀಶ್ ರುಕುಂಪೂರ, ಸೋಮಶೇಖರ್ ಯಥತನೂರ, ಈರಣ್ಣ ಸೋಮ ಜಾಲ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!