ಗೌರಮ್ಮನ ಸ್ವಾಗತಕ್ಕೆ ರಂಗೋಲಿ ಅಂಗಳ : ಚಿತ್ರಯ್ಯನಹಟ್ಟಿಯಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡ ಮಹಿಳೆಯರು
ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿಯಲ್ಲಿ ಸಂಭ್ರಮದ ಗೌರಮ್ಮನ ಹಬ್ಬವನ್ನು ಆಚರಿಸಿದರು.
ನಗರಸಭೆ ಸದಸ್ಯೆ ಕವಿತಾಬೋರಯ್ಯ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಬಹಳ ಸಡಗರ ಸಂಬ್ರಮದಿAದ ಮಹಿಳೆಯರಿಂದ ಗೌರಮ್ಮ ಅದ್ದೂರಿ ಸ್ವಾಗತ ಪಡೆದಿದ್ದಾಳೆ ಇನ್ನೂ ಸಂಜೆ ವೇಳೆ ವಿವಿಧ ಕಾರ್ಯಕ್ರಮಗಳ ಮೂಲಕ ಗೌರಮ್ಮ ದೇವಿಗೆ ಎರಡು ದಿನಗಳ ನಂತರ ತೆರೆ ಕಾಣಲಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಮಹಿಳೆಯರಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಕಾಯಕ್ರಮದಲ್ಲಿ ಹಲವು ಮಹಿಳಾ ಮಣಿಯರು ಭಾಗವಹಿಸಿ ರಂಗೋಲಿ ಚಿತ್ತಾರ ಬಿಡಿಸಿದರು.
ಇನ್ನೂ ರಂಗೋಲಿ ಸ್ಪರ್ಧೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ವಿವಿಧ ಬಣ್ಣಗಳಿಂದ ರಂಗೋಲಿಗಳನ್ನು ಬಿಡಿಸಿದ್ದರು.