ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭೋದಿಸಿದ : BEO ಕೆ.ಎಸ್.ಸುರೇಶ್
ಚಳ್ಳಕೆರೆ : ಮಕ್ಕಳ ಕಲಿಕೆ ಯಾವುದೇ ಕಾರಣಕ್ಕೂ ಹಿಂದೂಳಿಯದೆ ಸಮಾಂತರ ಕಲಿಕೆಯಾಗಿ ಮುಂದಿನ ಹಂತಕ್ಕೆ ಕಳಿಸಲು ಮಕ್ಕಳನ್ನು ಪ್ರೇರೆಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದ್ದಾರೆ.
ಅವರು ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಲಿಕಲಿ ಶಿಕ್ಷಕರಿಗೆ ಆಯೋಜಿಸಿದ್ದ ಕಲಿಕಾ ಚೇತರಿಕೆ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೊನಾ ಸಮಯದಲ್ಲಿ ಮಕ್ಕಳು ಮರೆತಂಹ ಚಟುವಟಿಕೆಗಳನ್ನು ಕಲಿಕಾ ಚೇತರಿಕೆ ಮೂಲಕ ನಲಿಕಲಿ ಮೂಲಕ ಅಭಿವೃದ್ಧಿ ಪಡಿಸಬಹುದು, ನಲಿಕಲಿಯಲ್ಲಿ ಕಲಿತ ಮಕ್ಕಳು ಮುಂದಿನ ತರಗತಿಯಲ್ಲಿ ಅತೀ ಹೆಚ್ಚಿನ ಚಟುವಟಿಕೆಗಳನ್ನು ಕಲಿಯುವುದರ ಮೂಲಕ ಅವರ ಮಾನಸಿಕ ಮಟ್ಟ ಭಾಷೆ ಹಿಡಿತಕ್ಕೆ ಹಿಂಬು ನೀಡುತ್ತದೆ ಎಂದರು.
ಇನ್ನೂ ಕನ್ನಡ ವರ್ಣಮಾಲೆಯಲ್ಲಿ ಬರುವ ಹಲವು ವಿಧಗಳ ಬಗ್ಗೆ ಸಮಗ್ರವಾಗಿ ಕಲಿಕಾ ಚೇತರಿಕೆ ಮೂಲಕ ಭಾಷೆಯ ಹಿಡಿತಕ್ಕೆ ತಕ್ಕಂತೆ ಮಕ್ಕಳಿಗೆ ನಲಿಕಲಿ ಮೂಲಕ ಅಭ್ಯಾಸ ಮಾಡಿಸಬೇಕು ಎಂದರು.
ಮಕ್ಕಳಿಗೆ ಕಲಿಕಾ ಚೇತರಿಕೆ ಪುಸ್ತಕದ ಮೂಲಕ ಮೈಲು ಗಲ್ಲುಗಳ ಮೂಲಕ ವಾಚಕದ ಮೂಲಕ ಬರೆದು,ಹಾಗು ಓದುವ ಅವ್ಯಾಸ ಮಾಡಿಸಬೇಕು.
ಮೊದಲಿಗೆ ಕೇಳುವುದು,
ಬರೆಯುವುದು ಹಾಗು ಹೇಳುವುದು ಈ ಮೂರು ಕ್ರಮ ಬದ್ದತೆಯ ಮೂಲಕ ಈ ಹಂತಗಳು ಒಟ್ಟಾಗಿ ನಡೆಯಬೇಕು.
ಡಿಸೆಂಬರ್ ಅಂತ್ಯದಲ್ಲಿ ಮುಂದಿನ ಹಂತಕ್ಕೆತಲುಪಲು ಮಗುವಿನ ಭೌದ್ಧಿಕ ಮಟ್ಟ ಹೆಚ್ಚಿಸಬೇಕು, ಜೊತೆಗೆ ನಲಿಕಲಿ ದಾಖಲೆ ನಿರ್ವಹಣೆ ಮಾಡಬೇಕು ಎಂದರು.
ಈದೇ ಸಂಧರ್ಭದಲ್ಲಿ ಕಲಿಕಾ ಚೇತರಿಕೆ ತರಬೇತಿಗೆ ಆಗಮಿಸಿದ ಶಿಕ್ಷಕರು ಹಾಜರಿದ್ದರು.