ಮೂರು ಜನ ಸಾವಿಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಿ : ಶಾಸಕ ಟಿ.ರಘುಮೂರ್ತಿ ಸೂಚನೆ
ಚಳ್ಳಕೆರೆ : ಒಂದೇ ಕುಟುಂಬದ ಮೂರುಜನರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ವಿಷಾಧನೀಯ
ಇತರದ ಘಟನೆಗಳು ಮತ್ತೆ ಮರುಕಳಿಸದಂತೆ ಪೊಲಿಸ್ ಇಲಾಖೆ ಉನ್ನತ ಮಟ್ಟದ ತನಿಖೆ ಕೈಗೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಗೋಪನಹಳ್ಳಿ ಗ್ರಾಮದ ಒಂದೇ ಕುಟುಂಬ ತಾಯಿ ಹಾಗೂ ಹೆಣ್ಣು ಮಕ್ಕಳು ಸೇರಿ ಮೂರು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೃದಯ ವಿದ್ರವಾಕವಾದ ಘಟನೆ
ಮಾನಸೀಕ ಖಿನ್ನತೆಗೆ ಬಲಿಯಾಗುರುವುದು ಮೇಲ್ನೋಟಕ್ಕೆ ಕಂಡು ಬಂದರೂ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದರು
ಅವರು
ನಗರದ ಶವಗಾರದಲ್ಲಿರುವ ಮೃತ ದೇಹಗಳಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡಿದರು.
ಬಡ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಾರೆ ಎಂದರೆ ಇದರ ಹಿಂದೆ ಏನೋ ಸಮಸ್ಯೆ ಇರುತ್ತದೆ. ಸಂಬಂಧಿಕರಿಂದ ದೂರು ಸ್ವೀಕರಿಸಿ ಆತ್ಮಹತ್ಯೆ ಮಾಡಿಕೊಂಡವರ ಆತ್ಮಕ್ಕೆ ಶಾಂತಿ ಸಿಗ ಬೇಕಾದರೆ ತಪ್ಪಿತಸ್ಥರಿಗೆ ಕಾನೂನು ರೀತಿ ಕಠಿಣ ಶಿಕ್ಷೆಯಾಗ ಬೇಕು ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸುವಂತೆ ಡಿವೈಎಸ್‌ಪಿ ರಮೇಶ್‌ಕುಮಾರ್, ವೃತ್ತ ನಿರೀಕ್ಷಕ ಸಮೀವುಲ್ಲ ಇವರಿಗೆ ಸೂಚನೆ ನೀಡಿದರು.
ವೃತ್ತ ನಿರೀಕ್ಷ ಸಮೀವುಲ್ಲ ಮಾತನಾಡಿ ಕುಟುಂಬಸ್ಥರಿಂದ ದೂರು ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.