ನಾಯಕನಹಟ್ಟಿ: ಎಸ್‌ಸಿ-ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಸಚಿವ ಬಿ.ಶ್ರೀರಾಮುಲು ಮೀಸಲಾತಿ ಹೆಚ್ಚಳ ಮಾಡಿಸಿ ನುಡಿದಂತೆ ನಡೆದಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಹೇಳಿದರು.

ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಎಸ್‌ಟಿ ಸಮಾವೇಶದ ಕುರಿತು ನಾಯಕನಹಟ್ಟಿ ಬಿಜೆಪಿ ಮಂಡಲದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಎಸ್‌ಸಿ-ಎಸ್‌ಟಿ ಮೀಸಲಾತಿಗಾಗಿ ಅನೇಕ ಹೋರಾಟಗಳು ನಡೆದರು ಈ ಹಿಂದೆ ಆಡಳಿತದಲ್ಲಿ ಪಕ್ಷಗಳು ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ಆದರೆ ಈಗ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಎಸ್ಸಿ-ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದೆ. ಸಚಿವ ಶ್ರೀರಾಮುಲು ಎಸ್‌ಸಿ-ಎಸ್ ಟಿ ಮೀಸಲಾತಿ ಕೊಡಿದುತ್ತೇನೆ ಎಂದು ಮಾತು ಕೊಟ್ಟಿದ್ದರು., ಕೊಟ್ಟ ಮಾತಿನಂತೆ ಸಚಿವರು ಮೀಸಲಾತಿ ಹೆಚ್ಚಳ ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆನೀಡಿದರು.
ಬಳ್ಳಾರಿಯಲ್ಲಿ ಇದೇ ನವೆಂಬರ್ ೨೦ ರಂದು ನಡೆಯುವ ರಾಜ್ಯ ಮಟ್ಟದ ಎಸ್‌ಟಿ ಸಮಾವೇಶದಲ್ಲಿ ಕ್ಷೇತ್ರದ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಸಚಿವ ಬಿ.ಶ್ರೀರಾಮುಲು ಕೈ ಬಲಪಡಿಸಬೇಕು. ಕಾರ್ಯಕರ್ತರು ಸಮಾವೇಶದ ಕುರಿತು ಗ್ರಾಪಂ ಮಟ್ಟಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಹೇಳಿದರು.

ಈ ವೇಳೆ ಮಂಡಲದ ಅಧ್ಯಕ್ಷ ರಾಮರೆಡ್ಡಿ, ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿಗೌಡ್ರು, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಮಂಡಲ ಉಪಾಧ್ಯಕ್ಷರಾದ ಚಂದ್ರಣ್ಣ, ಮಂಡಲ ಎಸ್‌ ಟಿ ಮೋರ್ಚಾ ಅಧ್ಯಕ್ಷರಾದ ಸಿ ಬಿ ಮೋಹನ್, ಮಂಡಲ ಕಾರ್ಯದರ್ಶಿ ಎಚ್‌ ವಿ ಪ್ರಕಾಶ್, ಮಂಡಲ ಉಪಾಧ್ಯಕ್ಷರಾದ ಮಮತಾ, ನಗರ ಘಟಕ ಅಧ್ಯಕ್ಷರಾದ ಎನ್ ಮಹಾಂತಣ್ಣ, ಮಂಡಲ ರೈತ ಮೋರ್ಚ ಅಧ್ಯಕ್ಷರಾದ ಎಚ್ ಬಿ ಬಾಲರಾಜ್, ಹೊನ್ನೂರ್ ಗೋವಿಂದಪ್ಪ ,ವೆಂಕಟಪ್ಪ ಬಿಜೆಪಿ ಮುಖಂಡ ಸೋಮು ಚಿತ್ರದುರ್ಗ, ಸೇರಿದಂತೆ ಮುಂತಾದವರು ಇದ್ದರು.

About The Author

Namma Challakere Local News
error: Content is protected !!