ಚಳ್ಳಕೆರೆ : ಕನ್ನಡ ರಾಜ್ಯೋತ್ಸವ ದಲ್ಲಿ ಕನ್ನಡ ಶಾಲೆಗಳ ಮಕ್ಕಳಿಗೆ ಇಲ್ಲ ಪ್ರಾಶಸ್ತ್ಯ
ಹೌದು ಇದು ಚಳ್ಳಕೆರೆ ನಗರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 67 ನೇ ಕನ್ನಡ ರಾಜ್ಯೋತ್ಸವದ ಸಮಾರಂಭದ ವೇದಿಕೆಯಲ್ಲಿ ಕಂಡು ಬಂದ ದೃಶ್ಯ
ಸಮಾರಂಭದ ಅಧ್ಯಕ್ಷತೆ ವಹಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮುಂದೆಯೇ ಇಂತಹ ಘಟನೆ ನಡೆದಿರುವುದು ಕನ್ನಡ ಮನುಸ್ಸುಳಿಗೆ ನೋವುಂಟು ಮಾಡಿದೆ.
ಇನ್ನೂ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಶಾಲಾ ಮಕ್ಕಳಿಗೆ ಮೊದಲ ಅವಕಾಶ ನೀಡಬೇಕು ಆದರೆ ಕೇವಲ ಖಾಸಗಿ ಶಾಲಾ ಮಕ್ಕಳಿಗೆ ಅವಕಾಶ ನೀಡಿರುವುದು ವಿಷಾಧನೀಯ
ಕನ್ನಡ ಸರಕಾರಿ ಶಾಲೆಗಳ ಉಳಿವಿಗೆ ಈಡಿ ರಾಜ್ಯದಲ್ಲಿ ದೊಡ್ಡ ಹೋರಾಟ ನಡೆಯುತ್ತಿದೆ ಆದರೆ ಇಂತಹ ಸಂಧರ್ಭದಲ್ಲಿ ಕನ್ನಡ ರಾಜ್ಯೋತ್ಸವ ದಿನಂದಂದೆ ಇಂತಹ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಅವಕಾಶ ನೀಡಿರುವುದು ಖಂಡನೀಯ ಎಂದು ಕನ್ನಡಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನೂ ಮುಂದಿನ ದಿನಗಳಲ್ಲಿ ಈತರನಾದ ಗೊಂದಲಗಳಿಗೆ ಶಾಸಕರು ಹಾಗು ತಾಲೂಕು ಮಟ್ಟದ ಅಧಿಕಾರಿಗಳು ಕ್ರಮವಹಿಸುವರೋ ಕಾದು ನೋಡಬೇಕಿದೆ