ಅ.30ರಂದು ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆ : ಶಾಸಕ ಟಿ.ರಘುಮೂರ್ತಿ ಹೇಳಿಕೆ
ಚಳ್ಳಕೆರೆ ನಗರದ ವಾಲ್ಮೀಕಿ ವಾಲ್ಮೀಕಿ ಮಂಟಪದಲ್ಲಿ ಸಮುದಾಯದ ಮುಖಂಡರು ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮೀಸಲಾತಿ ಹೆಚ್ಚಳದ ಹೋರಾಟದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಗಳಾದ ಪ್ರಸನ್ನಂದ ಗುರುಗಳು ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಅಧಿಕಾರಿಗಳು ಆಚರಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಬಂಧುಗಳು ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು ಸಮಾಜದ ಕಾರ್ಯಕ್ರಮಗಳಲ್ಲಿ ಪಕ್ಷಾತೀತವಾಗಿ ಭಾಗವಹಿಸಿ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ನಂತರ ಅ.30 ಭಾನುವಾರ ಜಯಂತಿಯನ್ನು ಅದ್ದೂರಿಯಾಗಿ ಜಯಂತಿ ಆಚರಿಸಲು ಸರ್ವಾನಿಮತದಿಂದ ಸಭೆ ತಿರ್ಮಾನ ಕೈಗೊಳ್ಳಾಯಿತು.
ವಾಲ್ಮೀಕಿ ಜಯಂತಿಯ ಮೆರವಣಿಗೆಯಲ್ಲಿ ವಿವಿಧ ಜಾನಪದಕಲಾ ತಂಡಗಳು, ಸಂಗೀತ ವಾದ್ಯಗಳು, ಡೊಳ್ಳು ಕುಣಿತ, ಚಂಡೆ ವಾದ್ಯಗಳನ್ನು ಭಾಗವಹಿಸಲಿದ್ದಾವೆ,
ಜಯಂತಿ ಅಂಗವಾಗಿ ಅ.29ರಂದು ಶನಿವಾರ ಬೈಕ್ ಮೆರವಣಿಗೆ ನೆಡೆಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಚಳ್ಳಕೆರೆ ವಿಧಾನ ಸಭಾಪಕ್ಷೇತರ ಅಭ್ಯರ್ಥಿಯಾದ ಕೆ.ಟಿ.ಕುಮಾರಸ್ವಾಮಿ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ಸಿ-ಎಸ್ಪಿ ಆಯೋಗದ ಸದಸ್ಯ ಜೆ.ಪಿ ಜಯಪಾಲಯ್ಯ, ಜೆಡಿಎಸ್ ಪಕ್ಷದ ವಿಧಾನ ಸಭಾ ಅಭ್ಯರ್ಥಿ ರವೀಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಮಾಜಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕ.ರ.ವೇ ಅಧ್ಯಕ್ಷ ಟಿ.ಜೆ.ವೆಂಕಟೇಶ್, ವಾಲ್ಮೀಕಿ ಕಲ್ಯಾಣ ಮಂಟಪದ ಕಾರ್ಯದರ್ಶಿ ದುರ್ಗಾವರ ತಿಪ್ಪೇಸ್ವಾಮಿ,
ತಹಸಿಲ್ದಾರ್ ಎನ್.ರಘುಮೂರ್ತಿ, ಇನ್ಸೆಪೆಕ್ಟೆರ್ ಉಮೇಶ್, ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ಮಂಗಳಮ್ಮ, ಕಾರ್ಯದರ್ಶಿ ಸೂರ್ಯಪ್ರಭಾ, ಜಯಲಕ್ಷ್ಮಿ, ಮಾಜಿ ನಗರಸಭಾ ಸದಸ್ಯ ದಳವಾಯಿ ಮೂರ್ತಿ, ಮಾಜಿ ನಗರಸಭಾ ಸದಸ್ಯ ಚೇತನ್ ಕುಮಾರ್, ಟಿ.ಜೆ.ತಿಪ್ಪೇಸ್ವಾಮಿ, ಬಡಗಿ ಪಾಪಣ್ಣ, ಡಿ.ಕೆ.ಕಾಟಯ್ಯ, ಸೂರನಾಯಕ, ಜೆ.ರಘುವೀರ್ ನಾಯಕ, ಎಲ್‌ಐಸಿ ತಿಪ್ಪೇಸ್ವಾಮಿ, ಪೂಜಾರಿ ಬೈಯಣ್ಣ, ವಿಶ್ವನಾಥ್, ನಂದೀಶ್ವರ ಶ್ರೀನಿವಾಸ್, ಬುಜ್ಜಿ, ವಸಂತ್, ಹಾಗೂ ಜನಪ್ರತಿ ನಿಧಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!