ರಾಷ್ಟ್ರಮಟ್ಟದ ಸೆಪೆಕ್ ಟಕ್ರಾ ಚಾಂಪಿಯನ್ ಶಿಪ್ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕಗಳಿಸಿದ ಎಸ್ಆರ್ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು.
ಚಳ್ಳಕೆರೆ: ಅಕ್ಟೋಬರ್ 3ರಿಂದ 7ರ ವರೆಗೆ ನಡೆದ 25ನೇ ಉಪ-ಜೂನಿಯರ್ ಸೆಪೆಕ್ ಟಕ್ರಾ ಬಾಲಕರ ಮತ್ತು ಬಾಲಕಿಯರ ರಾಷ್ಟ್ರೀಯ ಚಾಂಪಿಯನ್ಶಿಪ್ – 2022ರ,
ಎಸ್ ಎಮ್ ಕಲೂಟಿ ಕಾಂಪೋಸಿಟ್ ಸ್ಪೋರ್ಟ್ಸ್ ರೆಸಿಡೆನ್ಶಿಯಲ್ ಸ್ಕೂಲ್ ಚಂದರಗಿ, ಬೆಳಗಾವಿಯಲ್ಲಿ ರಾಜ್ಯ ತಂಡವನ್ನು ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳಾದ ಸಂಜನಾ ವಿಜಯಲಕ್ಷ್ಮಿ ಕನಸು ಮತ್ತು ಸೂರ್ಯ ಕಿರಣ ಪ್ರತಿನಿಧಿಸಿ ಸಂಜನಾ ಬೆಳ್ಳಿಯ ಪದಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಬಿ ಎ ಲಿಂಗಾರೆಡ್ಡಿ , ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ , ಪ್ರಾಂಶುಪಾಲರಾದ ಶ್ರೀಯುತ ವಿಜಯ್ ಬಿ ಎಸ್, ತರಬೇತುದಾರರಾದ ಅಶೋಕ್ ಮೋಹಿತೆ ಮತ್ತು ಸ್ವಪ್ನಾ, ಶಾಲೆಯ ಆಡಳಿತವೃಂದ ಆತ್ಮಾನಂದ ಮತ್ತು ತಿಪ್ಪಾರೆಡ್ಡಿ ಹಾಗೂ ಶಿಕ್ಷಕ ವೃಂದದವರು ಶುಭಕೋರಿದ್ದಾರೆ.