ಚಳ್ಳಕೆರೆ : ಸಮುದಾಯ ಅಭಿವೃದ್ದಿ ಹೊಂದಲು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಬೇಕು :ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಪ್ರತಿಯೊಂದು ಸಮುದಾಯದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಮಹಾನಿಯರನ್ನು ನಾವು ಕಾಣಬಹುದು ಅಂತಹ ಮಹಾನ್ ಕಾಯಕ ಯೋಗಿ ನುಲಿಯಚಂದಯ್ಯನವರು ಒಬ್ಬರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದರೆ.
ಅವರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿ ನಂತರ ಮಾತನಾಡಿದರು. ಯಾವುದೇ ಸಮುದಾಯ ಅಭಿವೃದ್ದಿ ಹೊಂದಲು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಬೇಕು ಆದ್ದರಿಂದ ನಮ್ಮ ಪೂರ್ವಜರು ಹಾಗೂ ಮಹಾನ್ ವ್ಯಕ್ತಿಗಳು ವಚನಕಾರರು ಇತೆರನಾಗಿ ವಚನ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ನುಲಿಯ ಚಂದಯ್ಯನವರು ಕಾಯಕಯೊಗಿ ತಮ್ಮಕಾಯಕದ ಮೂಲಕ ತಮ್ಮ ನಿಷ್ಠ ಮೆರೆದ ಮಹಾನೆ ಚೇತನರು ಅವರು ಅಂದು ಸಣ್ಣ ಸಮುದಾಯದಲ್ಲಿ ಹುಟ್ಟಿದರೂ ಕೂಡ ಇಂದು ಈಡೀ ಸಮಾಜದ ಮಾರ್ಗದರ್ಶಕರು ಹಾಗಿದ್ದಾರೆ ಎಂದರು.
ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್ ಮಾತನಾಡಿ, ತಮ್ಮ ಇಷ್ಟ ಲಿಂಗದ ಪೂಜೆಯಲ್ಲಿ ಲಿಂಗ ಜಾರಿ ಕೆಳಕ್ಕೆ ಬಿದ್ದೊಡೆ ಆದೇವರಿಗೆ ಕೆಲಸ ಹೇಳಿ ಕಾಯಕ ನಿಷ್ಠೆ ಮೆರೆಯುವ ನುಲಿಯಚಂದಯ್ಯರವರ ಹಾದಿಯಲ್ಲಿ ಸಾಗೋಣ ಹೇಳಿದ್ದಾರೆ.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ನಿರ್ಮಾಲಾ, ಸಾವಿತ್ರಮ್ಮ, ಸುಮಕ್ಕ ಬರಮಣ್ಣ ನಿರ್ಮಲ, ಪ್ರಸನ್ನ ಕುಮಾರ್ ಮತ್ತು ರಮೇಶ್‌ಗೌಡ ರಾಘವೇಂದ್ರ, ಮಾಜಿ ನಗರಸಭಾ ಸದಸ್ಯರಾದ ಪ್ರಸನ್ನ ಕುಮಾರ್ ದೊಡ್ಡರಂಗಪ್ಪ ಪೌರಾಯುಕ್ತ ಸಿ.ಚಂದ್ರಪ್ಪ, ಪ್ರಸನ್ನಕುಮಾರ್, ರೇಷ್ಮೆ ಇಲಾಖೆ ಕೆಂಚಾಜಿರಾವೋ, ತಿರುಕಪ್ಪ, ರಮೆಶ್, ಇತರ ಸಮಾಜದ ಮುಖಂಡರು ಇದ್ದರು.