ಚಳ್ಳಕೆರೆ : ಸಾರ್ವಜನಿಕರು ಗ್ರಾಮಗಳಲ್ಲಿ ದ್ವೇಷ ಅಸೂಯೆ ಮತ್ಸರದಂತ ಭಾವನೆಗಳನ್ನು ದೂರ ಮಾಡಿ ಸಾಮರಸ್ಯ ಬದುಕಿನ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೆಂದು ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು
ಅವರು ಪರಶುರಾಮಪುರ ಹೋಬಳಿ ಚೌಳೂರು ಗ್ರಾಮದ ಸರ್ವ್ನಂ 88ರ ದಾರಿ ವಿವಾದಕ್ಕೆ ಸಂಬಂಧಿಸಿದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಸಾಕಷ್ಟು ಗ್ರಾಮಗಳಲ್ಲಿ ನಕಾಶೆ ಕಂಡ ದಾರಿ ಮತ್ತು ರೂಡಿಗತ ದಾರಿಗೆ ಸಂಬಂಧಿಸಿದ ವಿವಾದಗಳಿವೆ
ಈ ಎಲ್ಲಾ ವಿವಾದಗಳಿಗೂ ಕೂಡ ಕಾನೂನಾತ್ಮಕವಾಗಿ ಪರಿಹಾರ ಒದಗಿಸುವುದು ಕಷ್ಟ ಸಾಧ್ಯದ ಮಾತು ಎಲ್ಲಿ ಎಲ್ಲಿ ಈ ರೂಡಿ ದಾರಿಗಳಿವೆ ಅಲ್ಲಿನ ರೈತರು ವೈಯಕ್ತಿಕ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ವಿವಾದಗಳನ್ನು ಸೃಷ್ಟಿಸಿಕೊಂಡಿರುವುದು ಬಹುತೇಕ ಕಂಡು ಬಂದಿದೆ ರೈತರಿಗೆ ದಾರಿಗಳು ಅವನ ಒಕ್ಕಲುತನದ ಕೆಲಸ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ.
ಸುಮಾರು 50 ವರ್ಷಗಳಿಂದ ಉಪಯೋಗಿಸಿಕೊಂಡು ಬಂದಿರುವAತ ಜಮೀನಿನಲ್ಲಿಯೂ ಕೂಡ ಈಗ ವಿವಾದಗಳನ್ನು ಸೃಷ್ಟಿಸಿಕೊಂಡಿರುವುದು ಕಂಡುಬAದಿದೆ ಈ ರೀತಿಯ ರೂಡಿ ದಾರಿಗಳಿಗೆ ಸರ್ಕಾರದಿಂದ ಸಕ್ರಮೀಕರಣಗೊಳಿಸಲು ನಿಯಮಾವಳಿಯಲ್ಲಿ ಅವಕಾಶವಿದೆ
ಆದಾಗ್ಯೂ ಕೂಡ ಯಾವುದೇ ರೈತರು ಇಂಥ ವಿವಾದಗಳನ್ನು ಸೃಷ್ಟಿಸಿಕೊಳ್ಳಬಾರದು ಹಾಲಿ ಈ ಗ್ರಾಮದಲ್ಲಿ ಉಪಯೋಗಿಸುತ್ತಿರುವಂತಹ ಈ ರೂಡಿ ದಾರಿ ಸರ್ಕಾರಿ ಸ್ವಾಮ್ಯದ ನಿಯಮಾವಳಿಗಳಲ್ಲಿ ಒಳಪಟ್ಟಿದ್ದು ಇದನ್ನು ಸರ್ಕಾರದ ವತಿಯಿಂದ ಸಕ್ರಮಿಗೊಳಿಸಲಾಗುವುದು ಹಾಗೆ ಈ ದಾರಿ ವಿವಾದ ಸುಖಾಂತ್ಯ ಕಂಡಿದೆ ಮುಂದಿನ ದಿನಗಳಲ್ಲಿ ಈ ದಾರಿ ವಿಚಾರದಲ್ಲಿ ಯಾರೂ ಕೂಡ ವಿವಾದ ಸೃಷ್ಟಿಸಿಕೊಳ್ಳಬಾರದೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಚೌಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಣ್ಣ, ಶಿಕ್ಷಕ ವೀರಭದ್ರಪ್ಪ, ತಾಲೂಕು ಸರ್ವೆ ಅಧಿಕಾರಿ ಪ್ರಸನ್ನಕುಮಾರ್, ರಾಜೇಶ್, ನಿರೀಕ್ಷಕ ಮೋಹನ್ ಕುಮಾರ್ ಉಪಸ್ಥಿತರಿದ್ದರು