ಚಳ್ಳಕೆರೆ :
ಚಿತ್ರದುರ್ಗ: ಲಿಂಗೇಶ್ ನಿಗೂಢ ಸಾವಿನ ಸುತ್ತ
ಅನುಮಾನದ ಹುತ್ತ
ಭಾನುವಾರ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್ ಹಾವೇರಿ ಬಳಿ
ಮೇಲ್ವೇತುವೆ ಪಕ್ಕದಲ್ಲಿ ನಿಂತಿತ್ತು. ಮೃತ ದೇಹದ ಪಕ್ಕದಲ್ಲಿ ನೀರಿನ
ಬಾಟಲಿ ಮತ್ತು ಚಾಕೋಲೆಟ್ ಬಿದ್ದಿತ್ತು.
ಇದು ಚಿತ್ರದುರ್ಗದ
ಡಾನ್ಸ್ ಮಾಸ್ಟರ್ ಲಿಂಗೇಶ್ ಅವರ ಮೃತ ದೇಹದ ಸ್ಥಿತಿಯಾಗಿತ್ತು.
ಅವರ ಕತ್ತು ಸೀಳಲಾಗಿತ್ತು. ಆದರೆ ಕೊಲೆ ಮಾಡಿದ ಆರೋಪಿಗಳು
ನಾಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ ಕೊಲೆಯೋ ಎಂದು
ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಪೊಲೀಸರು ತನಿಖೆ
ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.

