ಚಳ್ಳಕೆರೆ : ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಕ್ಯೆಕರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.


ಅವರು ತಾಲೂಕು ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಚಳ್ಳಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆಯೋಜಿಸಿದ್ದಂತಹ ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು,


ಗ್ರಾಮದಲ್ಲಿ ಜನತೆ ಯಾವ ಯಾವ ಸ್ಥಿತಿಯಲ್ಲಿದ್ದಾರೆ, ಸರ್ಕಾರಿ ಸೌಲಭ್ಯಗಳು ಯಾವ ಯಾವ ಜನರಿಗೆ ತಲುಪಿಲ್ಲ, ಎಂಬುದರ ಬಗ್ಗೆ ಅಧ್ಯಾಯನ ಮಾಡಬೇಕು ಈ ಬಗ್ಗೆ ಚರ್ಚೆ ಸಂಹಾವನದAತಹ ಕಾರ್ಯಗಳಾಗಬೇಕು ಶೋಷಿತರ ಮತ್ತು ದೀನ ದಲಿತರ ಏಳಿಗೆಗೆ ಕಂಕಣ ಬದ್ಧರಾಗಬೇಕು, ಇಂತಹ ಶಿಬಿರಗಳಲ್ಲಿ ಈ ಕೆಲಸ ಮಾಡುವ ದೀಕ್ಷೆ ಕೈಗೊಳ್ಳಬೇಕೆಂದು ಹೇಳಿದರು.


ಇದೇ ಸಂಧರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್‌ಸತ್ತಾರ್, ಕೃಷ್ಣೇಗೌಡ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ರೇವಣ್ಣ, ಸಾಹಿತಿ ಪ್ರೀತಂಬರ್ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!