ಚಳ್ಳಕೆರೆ : ರೈಲ್ವೆ ಮೇಲ್ಸಸೆತುವೆ ಮಾಡುವಂತೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೆವೆ ಆದರೆ ಆಳುವ ಸರಕಾರಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿವೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ಪ್ರವಾಸ ಮಂದಿರದಲ್ಲಿ ಆಯೋಜಿಸಿದ್ದ ಸಾರ್ವಜನಿಕರು, ರೈತ ಮುಖಂಡರು, ಸಂಘಟನೆಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ಶಾಸಕರಿಗೆ, ಸಚಿವರಿಗೆ, ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೆವೆ, ಆದರೆ ಅತೀ ಅವಶ್ಯ ವಾದಂತಹ ಸ್ಥಳ ‌ನಗರದ ಪಾವಗಡ ರಸ್ತೆಯ ರೈಲ್ವೆ ಗೇಟ್ ಮೇಲ್ಸಸೆತುವೆ ಆದರೆ ಅಧಿಕಾರಿಗಳು, ರಾಜಕರಿಗಳ ನಿರ್ಲಕ್ಷ್ಯ ಮನೋಭಾವ ದಿಂದ ಇಂದು ಸಾರ್ವಜನಿಕರು ಹೈರಾಣಾಗಿದ್ದಾರೆ.
ಆದ್ದರಿಂದ ಇದೇ
ಜೂನ್ 6 ರ ಒಳಗೆ ಮೇಲ್ಸಸೆತುವೆ ಕಾಮಗಾರಿಗೆ ಪ್ರಾರಂಭಿಸಬೇಕು ಇಲ್ಲವಾದರೆ ಅನಿದಿಷ್ಟಾವದಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಶ್ರೀಕಂಠಮೂರ್ತಿ, ತಿಮ್ಮಣ್ಣ,
ನೇತಾಜಿ ಪ್ರಸನ್ನ, ಪರೀದ್ ಖಾನ್, ಸುರೇಶ್, ಬೊಮ್ಮಯ್ಯ,
ಜಡೆ ತಿಮ್ಮಣ್ಣ, ಹನುಮಂತಯ್ಯ, ಬಾಬು, ಜಯಣ್ಣ, ಬೊಮ್ಮಯ್ಯ, ಇತರರು ಇದ್ದರು.

About The Author

Namma Challakere Local News
error: Content is protected !!