ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ,ಚಾಲಕನಿಗೆ ಗಂಭೀರ ಗಾಯ
ಚಳ್ಳಕೆರೆ :
ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಮುಖಿ ಡಿಕ್ಕಿಯಾಗಿದ್ದು ಕಾರಿ ನ ಚಾಲಕನಿಗೆ ಗಾಯಗಳಾಗಿದ್ದು ಬಸ್ ನಲ್ಲಿದ್ದ 50 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ ಸಮೀಪ ರಾಷ್ಟ್ರೀಯ ಹೆದ್ದಾರಿ 150 ಎ ರಲ್ಲಿ ಈ ಘಟನೆ ನಡೆದಿದ್ದು..
ಬಳ್ಳಾರಿ ಕಡೆಯಿಂದ ಚಳ್ಳಕೆರೆಗೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಗಾಯಗಳಾಗಿದ್ದು ಬಸ್ಸಿನಲ್ಲಿದ್ದ 50 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಎರಡು ವಾಹನಗಳು ಮುಖಮುಖಿ ಡಿಕ್ಕಿಯಾದ ಪರಿಣಾಮ ಕಾರು ಜಖಂ ಹಾಗಿದ್ದು ಬಸ್ ನ ಮುಂಭಾಗ ಕೂಡ ಜಖಂ ಹಾಗಿದೆ.
ಕಾರಿನ ಸುರಿಕ್ಷಿತ ಚೀಲಾ ಇದ್ದ ಕಾರಣ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.. .
ಈ ಅಪಘಾತ ಕುರಿತಂತೆ ಚಳ್ಳಕೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

