ಚಳ್ಳಕೆರೆ :
ಹೊಸದುರ್ಗ: ಬೆಳ್ಳಂಬೆಳಗ್ಗೆ ಕರಡಿಗಳು ಪ್ರತ್ಯಕ್ಷ ;
ಜನರಲ್ಲಿ ಆತಂಕ
ಹೊಸದುರ್ಗದ ಕಂಬದೇವರ ಬಡಾವಣೆಯಲ್ಲಿ ಇಂದು ಬೆಳ್ಳಂಬೆಳಗ್ಗೆ
ಎರಡು ಕರಡಿಗಳು ಪ್ರತ್ಯಕ್ಷವಾಗಿವೆ. ಬೆಳ್ಳಂಬೆಳಗ್ಗೆ ಜೋಡಿ ಕರಡಿಗಳ
ಕಂಡು ವಾಯು ವಿಹಾರಿಗಳು ಆತಂಕಗೊಂಡಿದ್ದಾರೆ.
ಹೊಸದುರ್ಗದ
ಪಟ್ಟಣದಲ್ಲಿ ಕೂಡ ಪದೇ ಪದೇ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು,
ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕರಡಿ ಓಡಾಟದ
ವಿಡಿಯೋಗಳು ಸಾರ್ವಜನಿಕರ ಮೊಬೈಲ್ ಗಳಲ್ಲಿ ಹರಿದಾಡುತ್ತಿವೆ.
ಕೂಡಲೇ ಅರಣ್ಯಾಧಿಕಾರಿಗಳು ಕರಡಿಗಳನ್ನು ಹಿಡಿಯಬೇಕೆಂದು
ಆಗ್ರಹಿಸಿದ್ದಾರೆ.

