“ಮಹಾಶಿವರಾತ್ರಿಯಂದು ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ”:-ಮಾತಾಜೀ ತ್ಯಾಗಮಯೀ ಅಭಿಪ್ರಾಯ.

ಚಳ್ಳಕೆರೆ:-ಮಹಾಶಿವರಾತ್ರಿಯಂದು ಆಚರಿಸಲಾಗುವ ಜಾಗರಣೆ ಮತ್ತು ಉಪವಾಸಕ್ಕೆ ಬಹಳ ಮಹತ್ವವಿದೆ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು.

ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕವಾಗಿ ಶಿವನಿಗೆ ಶಿವಸಹಸ್ರನಾಮ ಬಿಲ್ವಾರ್ಚನೆ ಮತ್ತು ಶಿವನ ಭಜನಾ ಕಾರ್ಯಕ್ರಮ ನಡೆಯಿತು,ಈ ಶಿವರಾತ್ರಿ ಸತ್ಸಂಗದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಜಗದಂಬಾ, ರತ್ನಮ್ಮ, ಶ್ರೀಮತಿ ವನಜಾಕ್ಷಿ ಮೋಹನ್, ಗೀತಾ ನಾಗರಾಜ್, ರತ್ನಮ್ಮ ಚೆನ್ನಬಸಪ್ಪ, ಮಮತ ಕೃಷ್ಣ,ಕಾವೇರಿ,ಪಂಕಜ ಚೆನ್ನಪ್ಪ,ಕೆ.ಎಸ್.ವೀಣಾ, ವೈಷ್ಣವಿ,ಜಯಾದಿತ್ಯ, ನಾಗರತ್ನಮ್ಮ, ಗೀತಾ ಭಕ್ತವತ್ಸಲ, ಸರಸ್ವತಮ್ಮ ಗೋವಿಂದರಾಜು, ವೆಂಕಟೇಶ್ ,ಯತೀಶ್ ಎಂ ಸಿದ್ದಾಪುರ, ಅಶ್ವಿನಿ ,ಸುದೀಪ್, ಚೇತನ್, ಸಂತೋಷ್,ಜಯಮ್ಮ, ಮೋಹಿನಿ, ತಿಪ್ಪಮ್ಮ,ಮಂಜುಳ, ದ್ರಾಕ್ಷಾಯಣಿ, ಶ್ರೀಜನಿ,ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!