ಶ್ರೀ ಕೊಲ್ಲಾಪುರದಮ್ಮ ಮತ್ತು ದುರ್ಗಾಂಬಿಕ ದೇವತೆಗಳ ಆಶೀರ್ವಾದ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರ ಮೇಲೆ ಇರಲಿ ಬಿಜೆಪಿ ರಾಜ್ಯ ಎಸ್. ಟಿ.ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ,

ನಾಯಕನಹಟ್ಟಿ:: ಬುಡಕಟ್ಟು ಜನರ ಶಕ್ತಿ ದೇವತೆಗಳಾದ ಕೊಲ್ಲಾಪುರದಮ್ಮ ಮತ್ತು ದುರ್ಗಾಂಬಿಕೆ ದೇವತೆಗಳು ಗ್ರಾಮದ ಪ್ರತಿಯೊಬ್ಬರಿಗೆ ಉತ್ತಮ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಬಿಜೆಪಿ ರಾಜ್ಯ ಎಸ್‌.ಟಿ .ಮೋರ್ಚ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ, ತಿಳಿಸಿದರು.

ಅವರು ಬುಧುವಾರ ಸಂಜೆ ಹೋಬಳಿಯ ಇಲ್ಲಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ಮತ್ತು ದುರ್ಗಾಂಬಿಕ ಜಾತ್ರಾ ಪ್ರಯುಕ್ತ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಕೊಲ್ಲಾಪುರದಮ್ಮ ಮತ್ತು ದುರ್ಗಾಂಬಿಕ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ .
ನಂತರ ಮಾಧ್ಯಮದೊಂದಿಗೆ ಮಾತನಾಡಿದರು ನಾಯಕನಹಟ್ಟಿ ಹೋಬಳಿಯಲ್ಲಿ ಅತಿ ಹೆಚ್ಚು ನಮ್ಮನಾಯಕ ಸಮುದಾಯದವರು ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬುಡಕಟ್ಟು ಸಂಸ್ಕೃತಿ ಸಂಪ್ರದಾಯಗಳು ಇನ್ನೂ ಜೀವಂತವಾಗಿ ಇವೇ ಗುಂತಕೋಲಮ್ಮನಹಳ್ಳಿ ಗ್ರಾಮದ ಜನತೆಗೆ ಶ್ರೀ ಕೊಲ್ಲಾಪುರದಮ್ಮ ಮತ್ತು ದುರ್ಗಾಂಬಿಕ ದೇವತೆಗಳು ಉತ್ತಮ ಆರೋಗ್ಯ ಮಳೆ ಬೆಳೆ ಗ್ರಾಮದಲ್ಲಿ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದರು.

ಇದು ವೇಳೆ ತಳಕು ಬಿಜೆಪಿ ಮುಖಂಡ ಎಂ ಎಸ್ ರವೀಂದ್ರ, ನಾಯಕನಹಟ್ಟಿ ಮಂಡಲ ಕಾರ್ಯದರ್ಶಿ ಎಚ್ ವಿ ಪ್ರಕಾಶ್, ಗುಂತಕೋಲಮ್ಮನಹಳ್ಳಿ ಯುವ ಮುಖಂಡರಾದ ಶಿಕ್ಷಕ ದಿವಾಕರ್, ವಾಸಣ್ಣ, ವಿಷ್ಣುಸಿಂಹ, ನಾಗೇಶ್, ತಿಪ್ಪೇಸ್ವಾಮಿ ತಿಪ್ಪೇಶ್ ಮಂಜು ಇದ್ದರು.

About The Author

Namma Challakere Local News
error: Content is protected !!