ಚಳ್ಳಕೆರೆ :
ಮೊಳಕಾಲ್ಕೂರು: ಹಾನಗಲ್ ಗ್ರಾಪಂ ಗೆ ಸ್ವಪ್ನ
ಅವಿರೋಧ ಆಯ್ಕೆ
ಮೊಳಕಾಲ್ಮುರಿನ ಹಾನಗಲ್ ಗ್ರಾಪಂಗೆ ಗುರುವಾರ ನಡೆದ
ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಎಸ್. ಸ್ವಪ್ನ
ಅವಿರೋಧವಾಗಿ ಆಯ್ಕೆಯಾದರು. ಒಟ್ಟು 20 ಸದಸ್ಯರ ಬಲವುಳ್ಳ
ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಅಧ್ಯಕ್ಷ
ಸ್ಥಾನಕ್ಕೆ ಎಸ್. ಸ್ವಪ್ನ ಒಬ್ಬರೇ ನಾಮ ಪತ್ರ ಸಲ್ಲಿಸಿದ ಕಾರಣ
ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ
15 ಜನ ಸದಸ್ಯರು ಹಾಜರಿದ್ದರು. ಚುನಾವಣಾಧಿಕಾರಿಯಾಗಿ
ತಹಶೀಲ್ದಾರ್ ಟಿ. ಜಗದೀಶ್ ಕರ್ತವ್ಯ ನಿರ್ವಹಿಸಿದರು.

