“ಮಹಾತ್ಮರ ಜೀವನ ನಮ್ಮ ಬದುಕಿಗೆ ದಾರಿದೀಪ”:- ಸಾಧನಾಶ್ರಮದ ಮಾತಾಜೀ ಯೋಗಾನಂದಮಯೀ ಅಭಿಪ್ರಾಯ.

ಮದ್ದಿಹಳ್ಳಿ:- ಮಹಾತ್ಮರ ಜೀವನ ಮತ್ತು ಸಂದೇಶಗಳು ನಮ್ಮ ಬದುಕಿಗೆ ದಾರಿದೀಪ ಎಂದು ದಾವಣಗೆರೆಯ ಶ್ರೀಸಾಧನಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಯೋಗಾನಂದಮಯೀ ಅಭಿಪ್ರಾಯಪಟ್ಟರು.

ಹಿರಿಯೂರು ತಾಲ್ಲೂಕಿನ ಮದ್ದಿಹಳ್ಳಿಯ ಮಡಿಲು ಫಾರ್ಮ್
ಹೌಸ್ ನಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಶ್ರೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರು ಪ್ರತಿಪಾದಿಸಿದ ಸಂದೇಶಗಳು ಆಧುನಿಕ ಜಗತ್ತಿನ ಜನರ ಬದುಕಿಗೆ ಪ್ರಸ್ತುತವಾಗಿದ್ದು ಅವುಗಳು ನಮ್ಮ ಬದುಕನ್ನು ಸಾರ್ಥಕತೆಯ ಕಡೆಗೆ ಕರೆದೊಯ್ಯುತ್ತವೆ, ಆದ್ದರಿಂದ ಮಹಾತ್ಮರ ಜೀವನ ಮತ್ತು ಸಂದೇಶಗಳನ್ನು ಪ್ರತಿನಿತ್ಯವೂ ಓದುವ ಮತ್ತು ಅವುಗಳನ್ನು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ನೆರೆದ ಸದ್ಭಕ್ತರಿಗೆ ಕಿವಿಮಾತು ಹೇಳಿದರು.

ಈ ಸತ್ಸಂಗ ಕಾರ್ಯಕ್ರಮದಲ್ಲಿ ಹಿರಿಯೂರಿನ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಚೈತನ್ಯಮಯೀ ಅವರು ವಿಶೇಷ ಭಗವನ್ನಾಮ ಸಂಕೀರ್ತನೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮದ್ದಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಭಜನೆಗಳನ್ನು ಹೇಳಿ ಭಕ್ತರನ್ನು ಭಾವ ಲೋಕದಲ್ಲಿ ತೇಲಿಸಿದರು.

ಈ ಸತ್ಸಂಗ ಕಾರ್ಯಕ್ರಮದಲ್ಲಿ ಕರಿಯಣ್ಣ, ಕಮಲಮ್ಮ ಅನಿಲ್, ನಾಗರಾಜ್, ಅನಿವಾಸಿ ಭಾರತೀಯರಾದ ಗೀತಾಂಜಲಿ, ಶಿಕ್ಷಕರಾದ ನಾಗೇಶ್, ರಮ್ಯ, ನಿವೃತ್ತ ಪ್ರಾಂಶುಪಾಲ ಹನುಮಂತಪ್ಪ, ನಿವೃತ್ತ ಶಿಕ್ಷಕ ವೆಂಕಟರಮಣಪ್ಪ ಗೌಡನಕುಂಟೆ ಶ್ರೀಧರ್, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ನ ನಾಗರಾಜ್, ಮಾನಸ, ಸಿದ್ದೇಶ್, ನಾಗರಾಜ್,ಪವಿತ್ರ, ಮಂಜಮ್ಮ, ಶಿವಕುಮಾರ್, ಕೆಂಚಮ್ಮ, ಮಹಾದೇವಮ್ಮ, ಜಗನ್ನಾಥ್,ರಂಗನಾಥ್ ಗೌರಮ್ಮ ಸೇರಿದಂತೆ ಮದ್ದಿಹಳ್ಳಿಯ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News

You missed

error: Content is protected !!