ಚಳ್ಳಕೆರೆ : ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಗ್ರಾಮ ಪಂಚಾಯತಿವತಿಂದ ಮಕ್ಕಳ ಹಿತ ದೃಷ್ಟಿಯಿಂದ ತುರ್ತಾಗಿ ಸೌಲಭ್ಯ ಹೊದಗಿಸಿ ಅಭಿವೃದ್ದಿ ಪಡಿಸುವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಓಬಣ್ಣ ಹೇಳಿದರು.

ಅವರು ತಾಲೂಕಿನ ಗೌರಸಮುದ್ರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವ ಸಲುವಾಗಿ ಶಾಲೆಗೆ ಬೇಟಿ‌ನೀಡಿ ಮಾತನಾಡಿದ ಅವರು, ನಮ್ಮ ಶಾಲೆ ನಮ್ಮ ಧ್ಯೇಯ ಎಂಬ ಘೋಶವಾಖ್ಯದೊಂದಿಗೆ ಗಡಿಭಾಗದ ಸರಕಾರಿ ಶಾಲೆಗಳು ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಬಾರದು, ನಮ್ಮ ಧ್ಯೆಯ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಖ್ಯ ಪಾತ್ರ ವಹಿಸಬೇಕು, ಅದರಂತೆ ಶಾಲೆಯ ಶಿಕ್ಷಕರು ಇಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ‌ಮಾಡಿ ಕೊಟ್ಟರೆ ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಶಾಸಕರ ಅನುದಾನ ಹೊದಗಿಸಿ ಮಕ್ಕಳ ಹಿತ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುತ್ತದೆ, ಇಲ್ಲಿ ಅಗತ್ಯವಾಗಿ ಹೈಟೆಕ್ ಶೌಚಾಲಯ, ಬಿಸಿಯೂಟದ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಈಗೆ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ಪಡಲಾಗುತ್ತದೆ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಗಡಿಭಾಗದ ಗ್ರಾಮಗಳು ಅಭಿವೃದ್ಧಿ ಪಥದತ್ತ ಸಾಗುತ್ತವೆ ಎಂದರು

.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ಓಬಣ್ಣ , ಸದಸ್ಯರಾದ ಶಶಿಕುಮಾರ್, ಚಂದ್ರಣ್ಣ ,ತಿಪ್ಪೇಸ್ವಾಮಿ , ವೀರಣ್ಣ ಹಾಗೂ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ ಸಹ ಶಿಕ್ಷಕ ನಾಗರಾಜ್ ಹಾಗು ಶಾಲಾ ಮಕ್ಕಳು ಇತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!