ಚಳ್ಳಕೆರೆ : ದುರಸ್ತಿ ಕಾಣದ ರಾಜಕಾಲುವೆ..! ರಸ್ತೆ ಕುಸಿತ ಅಪಘಾತದಿಂದ ಪಾರದ ಕಾರು,
ಚಳ್ಳಕೆರೆ :
ನಗರದಲ್ಲಿ ರಾಜಕಾಲುವೆ ಪಕ್ಕದ ರಸ್ತೆಯೊಂದು ಕುಸಿದು ಚಲಿಸುತ್ತಿರುವ ಕಾರು ಸಂಕಷ್ಟಕ್ಕೆ ಸಿಲುಕಿ ಕಾರು ಚಾಲಕ ಹಾಗೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರದ ಘಟನೆಯೊಂದು ಜರುಗಿದೆ.
ಹೌದು ಚಳ್ಳಕೆರೆ ನಗರದ ಕಾಟಪ್ಪನ ಹಟ್ಟಿ ಗೊಲ್ಲರಟ್ಟಿ ಸಮೀಪ ಇರುವ ರಾಜಕಾಲುವೆ ದುರಸ್ತಿ ಕಾಣದೆ, ಕಾಲುವೆ ಪಕ್ಕ ಹಾದು ಹೋಗಿರುವ ರಸ್ತೆ ಸಂಪೂರ್ಣವಾಗಿ ಕುಸಿಯುತ್ತಿದೆ ಇನ್ನು ಅನಿವಾರ್ಯವಾಗಿ ವಾಹನ ಸವಾರರು ಇದೇ ರಸ್ತೆ ಮೇಲೆ ಸಂಚಸಿರುವುದರಿಂದ ಮಂಗಳವಾರ ಬೆಳ್ಳಿಗೆ ಕಾರು ಚಾಲಕ ಇದೇ ರಸ್ತೆ ಮಾರ್ಗವಾಗಿ ಹಾದುಹೋಗುವಾಗ ರಸ್ತೆ ಕುಸಿದು ಕಾರು ಪಕ್ಕಕ್ಕೆ ಜರುಗಿದೆ ಇನ್ನೂ ತಕ್ಷಣವೇ ಎಚ್ಚೆತ್ತುಕೊಂಡ ಕಾರು ಚಾಲಕ ವಾಹನದಲ್ಲಿ ಇರುವವರನ್ನು ಕೆಳಗಿಳಿಸಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇನ್ನೂ ಕಳೆದ ಹಲವು ವರ್ಷಗಳಿಂದ ರಾಜಕಾಲುವೆ ದುರಸ್ತಿಗೆ ಇಲ್ಲಿನ ಸ್ಥಳೀಯ ನಿವಾಸಿಗಳು ಚಳ್ಳಕೆರೆ ನಗರಸಭೆಗೆ ಮನವಿ ಸಲ್ಲಿಸಿದರು ಕ್ಯಾರೆ ಎನ್ನದ ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವಂತಾಗಿದೆ.
ಇನ್ನಾದರೂ ಈ ಬಾರಿ ಬಜೆಟ್ ನಲ್ಲಿ ಅನುದಾನ ಹೊದಗಿಸಿ ರಾಜಕಾಲುವೆ ದುರಸ್ತಿ ಮಾಡುವರೋ ಕಾದು ನೋಡಬೇಕಿದೆ.