ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ 2023-2024ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ವೆಂಕಟೇಶ್ವರ ನಗರದಲ್ಲಿರುವ “ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ”(ಬೆಳಕು)ಗೆ ಭೇಟಿ ನೀಡಿ ಶಾಲೆಯ ಶಿಕ್ಷಕರಿಂದ ಶಾಲೆಯ ಹುಟ್ಟು, ಬೆಳವಣಿಗೆ ಹಾಗೂ ಕಾರ್ಯವೈಖರಿಯ ಬಗ್ಗೆ ವಿಶೇಷ ಮಾಹಿತಿಯನ್ನು ಸಂಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಬೆಳಕು ಶಾಲೆಯ ಶಿಕ್ಷಕರಾದ ನಾಗರಾಜ್, ಮಂಜುನಾಥ, ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಹೇಮಂತ್ ರಾಜ್ ಎಲ್ ಎನ್, ಉಪನ್ಯಾಸರಾದ ವಿಶ್ವನಾಥ್, ಪ್ರಶಿಕ್ಷಣಾರ್ಥಿಗಳಾದ ಯತೀಶ್ ಎಂ ಸಿದ್ದಾಪುರ, ಮರಿಸ್ವಾಮಿ, ಶ್ರೀಕಾಂತ್,ನಂದಿನಿ, ಪುಷ್ಪ,ನೀಲ, ಭಾಗೀರಥಿ ಅಮೃತಬಿಂದು,ರಾಧಾ, ಶ್ವೇತ, ಕಿಶೋರ್ ಮುಂತಾದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.