ಅ.17. ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಹಟ್ಟಿ ಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು

ನಾಯಕನಹಟ್ಟಿ: ಅ.3.
ಸರ್ಕಾರದ ಆದೇಶದಂತೆ ಅಕ್ಟೋಬರ್ ೧೭ರಂದು ಸಂಪ್ರದಾಯಕವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸೋಣ ಎಂದು ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷರಾದ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ತಿಳಿಸಿದರು.

ಗುರುವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಛೇರಿಯಲ್ಲಿ ಅ.೩ ರಂದು ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ವಾಲ್ಮೀಕಿ ಜಯಂತಿ ಹಬ್ಬವನ್ನು ನಾವೇಲ್ಲರೂ ಸೇರಿ ಒಗ್ಗಾಟ್ಟಾಗಿ ಆಚರಿಸೋಣ. ಈ ಭಾಗದಲ್ಲಿ ನಮ್ಮ ಸಮಾಜದವರು ಹೆಚ್ಚಾಗಿದ್ದು, ಪ್ರತಿಯೊಂದು ಹಳ್ಳಿಗಳಿಂದ ಹೆಚ್ಚಿನ ಜನರನ್ನು ಕರೆತರುವಂತೆ ಮುಖಂಡರುಗಳಿಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಯುವಕರು ಹೆಚ್ಚಿನ ಮುಂದಾಳತ್ವವನ್ನು ವಹಿಸಿಕೊಳ್ಳಬೇಕು ಎಂದರು.

ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಅಧ್ಯಕ್ಷ ಪಿ. ಕಾಟಂಲಿಂಗಯ್ಯ ಮಾತನಾಡಿ ಈ ಬಾರಿ ವಾಲ್ಮೀಕಿ ಜಯಂತಿಗೆ ಪಿಹೆಚ್‌ಡಿ ಪದವಿ ಪಡೆದ ಪದವಿದಾರರಿಗೆ ಮತ್ತು ಎಸ್.ಎಸ್.ಎಲ್.ಸಿ, ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಬೇಕು. ವಾಲ್ಮೀಕಿ ಜಯಂತಿಗೆ ಅತೀ ಹೆಚ್ಚು ಹಣ ಖರ್ಚು ಮಾಡುವುದು ಬೇಡ, ಸರಳವಾಗಿ ಆಚರಿಸಿದರೆ ಸೂಕ್ತ ಎಂದು ಸಲಹೆ ನೀಡಿದರು.

ಇನ್ನೋ ಜಿ.ಬಿ.ಮುದಿಯಪ್ಪ ಮಾತನಾಡಿ ವಾಲ್ಮೀಕಿ ಸಮಾಜದ ೫ ಸಾವಿರ ಜನರ ಸದಸ್ಯತ್ವ ಮಾಡಿಸಿದರೆ ನಮ್ಮ ಸಂಘಕ್ಕೆ ಲಾಭವಾಗುತ್ತದೆ. ಈ ಬಾರಿ ಒಗ್ಗಟ್ಟಾಗಿ ಆಚರಿಸೋಣ ಎಂದು ಹೇಳಿದರು. ಪ್ರತಿ ಬಾರಿ ಕೆಲವೊಂದು ಕಾಮಗಾರಿಗಳಿಗೆ ಕೈಗೆತ್ತಿಕೊಂಡAತೆ ಈ ಬಾರಿಯೂ ಮಹರ್ಷಿ ವಾಲ್ಮೀಕಿ ಪುತ್ತಳಿಯ ಕಾಮಗಾರಿಯನ್ನು ಕೈಗೊಳ್ಳೋಣ ಎಂದರು.

ಕರ್ನಾಟಕ ರಕ್ಷಣ ವೇದಿಕೆಯ ಹೋಬಳಿ ಅಧ್ಯಕ್ಷ ಪಿ.ಮುತ್ತಯ್ಯ ಜಾಗನೂರಹಟ್ಟಿ ಮಾತನಾಡಿ ನಮ್ಮ ಸಂಘದ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೋ ನಾವುಗಳು ಸಹ ಬದ್ದನಾಗಿರುತ್ತೇವೆ ಎಂದರು.

ಬಂಡೆ ಕಪಿಲೆ ಓಬಣ್ಣ ಮಾತನಾಡಿ ಪ್ರತಿಯೊಂದು ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಕರೆಯಿಸಿ ಮತ್ತೊಮ್ಮೆ ಪೂರ್ವಭಾವಿ ಸಭೆ ನಡೆಸೋಣ, ನಮ್ಮಲ್ಲಿ ಅನುದಾನ ಕೊರತೆ ಇರುವುದರಿಂದ ಸಮಾಜದ ಸರ್ಕಾರಿ ನೌಕರರ ಅವಶ್ಯಕತೆ ಬೇಕಾಗಿರುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ನಿರ್ದೇಶಕರಾದ ನೇರಲಗುಂಟೆ ಭೈಯಣ್ಣ ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ, ಎಸ್, ಓಬಯ್ಯ, ನಾಗರಾಜ್ ಹನುಮಣ್ಣ, ಚಿನ್ನಯ್ಯ, ಟಿ ಬಸಪ್ಪ ನಾಯಕ ,ಏಜೆಂಟರು ಪಾಲಯ್ಯ, ಕಾರ್ಯದರ್ಶಿ ನಲಗೇತನಹಟ್ಟಿ ಜಿ.ವೈ ತಿಪ್ಪೇಸ್ವಾಮಿ,ಬಗರ್ ಹುಕುಂ ಕಮಿಟಿ ಅಧ್ಯಕ್ಷ ಪಿ.ಜಿ. ಬೋರನಾಯಕ, ಮಲ್ಲೂರಹಳ್ಳಿ ಗ್ರಾ.ಪಂ.ಸದಸ್ಯ ಕಾಟಯ್ಯ, ಕೆ.ಟಿ.ನಾಗರಾಜ, ಡಾ|| ತಿಪ್ಪೇಸ್ವಾಮಿ ನಿವೃತ್ತ ಪಶು ವೈದ್ಯರು ಗೌಡಗೆರೆ, ಗುಂತಕೋಲಮ್ಮನಹಳ್ಳಿ ಶಿಕ್ಷಕ ಜಿ.ಎಂ. ಜಯಣ್ಣ, ಎಸ್. ಟಿ. ಬೋರಸ್ವಾಮಿ, ಮಾಜಿ ತಾಲೂಕ ಪಂಚಾಯತಿ ಸದಸ್ಯ ಎಸ್ ಬಸವರಾಜ್, ಕೆ.ಓ.ರಾಜಯ್ಯ, ಹಟ್ಟಿ ಮಲ್ಲಪ್ಪನಾಯಕ ಸಂಘದ ಉಪಾಧ್ಯಕ್ಷರು, ಸರ್ವ ಸದಸ್ಯರುಗಳು, ವಾಲ್ಮೀಕಿ ಸಮಾಜದ ಮುಖಂಡರುಗಳು, ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷರು, ಸದಸ್ಯರು ಇದ್ದರು.

Namma Challakere Local News
error: Content is protected !!