ಚಳ್ಳಕೆರೆ :
ನಾಯಕನಹಟ್ಟಿ ಯಲ್ಲಿ ಅತೀ ಹೆಚ್ಚು ಮಳೆಯಾಗಿದೆ
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ಅತೀ
ಹೆಚ್ಚು ಅಂದರೆ 31. 8 ಮಿಲಿ ಮೀಟರ್ ಮಳೆಯಾಗಿದೆ ಎಂದು
ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಚಳ್ಳಕೆರೆ 16. 5 ಮಿಲಿ ಮೀಟರ್
ಪರಶುರಾಂಪುರ 14. 6 ಮಿಲಿ ಮೀಟರ್, ತಳಕು 9.2 ಮಿಲಿ
ಮೀಟರ್ ಮಳೆಯಾಗಿದೆ.
ಶೇಂಗಾ ಬೆಳೆಗೆ ಮಳೆ ಇಲ್ಲದೆ ಒಣಗಿ
ಹೋಗುತ್ತಿದ್ದು, ಶೇಂಗಾ ಬೆಳೆಗೆ ಜೀವ ಕಳೆ ಬಂದಂತಾಗಿದೆ. ಎರಡು
ದಿನಗಳ ಹಿಂದೆ ಚಳ್ಳಕೆರೆ ತಾಲೂಕಿನಲ್ಲಿ ಶಾಸಕ ರಘುಮೂರ್ತಿ
ಒಣಗೊಗಿರುವ ಬೆಳೆ ನೋಡಿ ಪರಿಹಾರ ನೀಡುವಂತೆ ಡಿಸಿಗೆ
ಸೂಚಿಸಿದ್ದರು.