ಚಳ್ಳಕೆರೆ :
ಶಾಲಾಮಟ್ಟದಲ್ಲಿ ಮಕ್ಕಳು ಗಣಿತವನ್ನು ಆಸಕ್ತಿದಾಯಕವಾಗಿ ಕಲಿತರೆ ಜೀವನದಲ್ಲಿ ಎಂತಹದೇ ಸಮಸ್ಯೆ ಬಂದರೂ ಸುಲಭವಾಗಿ ನಿಭಾಯಿಸಬಲ್ಲರು ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದು ಘಟಪರ್ತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೊನ್ನೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಅವತು ತಾಲೂಕಿನ ಘಟಪರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಲಸೆ ಗ್ರಾಮದಲ್ಲಿ ಆಯೋಜಿಸಿದ್ದ
ಘಟಪರ್ತಿ ಗ್ರಾಮ ಪಂಚಾಯತಿ ಮಟ್ಟದ ಗಣಿತ ಕಲಿಕಾ ಆಂದೋಲನ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಪ್ರಾಥಮಿಕ ಅಂತದಿಂದಲೇ ಭಾಗವಹಿಸಿದರೆ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾ ಜಗತ್ತಿನಲ್ಲಿ ಭಾಗವಹಿಸಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್ ಪಿ ಕೆಸಿ. ಶಿವಣ್ಣ,
ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಟು ಶಾಲೆಗಳಿಂದ ನಾಲ್ಕು , ಐದು, ಆರು ತರಗತಿ ಮಕ್ಕಳು ಸುಮಾರು 270 ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನವಾಗಿ 1000. ದ್ವಿತೀಯ ಬಹುಮಾನವಾಗಿ 600. ತೃತೀಯ ಬಹುಮಾನ 400 ರೂಪಾಯಿಗಳ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ ಎಂದರು.

ಎಸ್ ಡಿ.ಎಂಸಿ.
ಅಧ್ಯಕ್ಷ ರಾಜಣ್ಣ ಮಾತನಾಡಿ,
ಪಂಚಾಯತಿ ವತಿಯಿಂದ ವಿಜೆತ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು,
ಕಾರ್ಯಕ್ರಮದ ಮಾರ್ಗದರ್ಶಕರಾಗಿ ವಸತಿ ಪ್ರೌಢಶಾಲೆಯ ಗಣಿತ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ ಹಾಗೂ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಿ ಪ್ರಶಸ್ತಿ ವಿತರಿಸಲಾಗಿದೆ, ಇನ್ನೂ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕಾರ ಅತೀ ಮುಖ್ಯವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ , ಎಸ್ ಡಿ.ಎಂಸಿ.
ಅಧ್ಯಕ್ಷ ರಾಜಣ್ಣ ,
ಮುಖ್ಯ ಶಿಕ್ಷಕರಾದ ವೆಂಕಟಸ್ವಾಮಿ, ಬಸವರಾಜ, ಪ್ರಹ್ಲಾದ, ಸೋಮಶೇಖರ, ಸತ್ಯಣ್ಣ , ಕಾಂತಣ್ಣ ,ಚನ್ನಮಲ್ಲಮ್ಮ , ಶಾಲಾ ಮಕ್ಕಳು, ಇತರರು ಇದ್ದರು.

Namma Challakere Local News
error: Content is protected !!