filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಸೂಕ್ಷ್ಮ ಪ್ರದೇಶದವಾದರೂ ಪೋಲಿಸ್ ಗವಾಲು‌ ಏಕೆ ಸ್ಥಳದಲ್ಲಿ ಇರಲಿಲ್ಲ..?

ಇಸ್ಲಾಮಿಕ್ ಧ್ವಜದ ಕೆಳಗೆ ಗಣೇಶೋತ್ಸವ ಮೆರವಣಿಗೆ..!

ಚಳ್ಳಕೆರೆ :

ಹಿಂದೂ‌ ಮುಸ್ಲಿಂ ಭಾಂಧವ್ಯ ಗಟ್ಟಿಯಾಗಬೇಕು, ಸರ್ವ ಧರ್ಮಗಳ ಸಮೀಲನವಾಗಬೇಕು, ಕೋಮು ಗಲಭೆಗಳು, ಧ್ವೇಶ ಅಸೂಯೆ ದೂರವಾಗಬೇಕು ಎಂಬ ಅನ್ಯ ಧರ್ಮಿಯರ ಮಾತಿನಂತೆ ಚಳ್ಳಕೆರೆ ನಗರದಲ್ಲಿ ವಿಸ್ಮಯಕಾರಿ ಘಟನೆಯೊಂದು ಜರುಗಿದೆ.

ಹೌದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಸ್ತೆ ಮಧ್ಯದಲ್ಲಿ ಕಂಬ ಹಾಕಿ ಚಪ್ಪರದಂತೆ ಇಸ್ಲಾಮಿಕ್ ಧರ್ಮದ ಯುವಕರು ತಮ್ಮ ಧರ್ಮಿಯ ಸಂಕೇತವಾದ ಧ್ವಜ ಹಾಗೂ ಬಟ್ಟೆಯನ್ನು ಕಟ್ಟಿ ಅಲಂಕರಿಸಿದ್ದರು, ಅದರೆ ಆದೇ ಮಾರ್ಗವಾಗಿ ಹಿಂದೂ‌ ಧರ್ಮಿಯರ ಗಣೇಶನ ಮೆರವಣೆಗೆ ಆಗಮಿಸಿದೆ

ಅದರೆ ಸ್ಥಳದಲ್ಲಿ ಇದ್ದವರೆಲ್ಲ ಮಂಡ್ಯದ ನಾಗಮಂಗಲ ಗಲಾಟೆ ಸಂಭವಿಸಬಹುದು ಎಂದು ರಸ್ತೆ ಪಕ್ಕದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು ಆದರೆ ಗಣೇಶ ವಿಸರ್ಜನೆಗಾಗಿ ಮೆರವಣಿಗೆ ಮೂಲಕ ಆದೇ ರಸ್ತೆ ಮಾರ್ಗವಾಗಿ ಆಗಮಿಸಿದ ಗಣೇಶ ಮೆರವಣಿಗೆ ಕಂಡ ಮುಸ್ಲಿಂ ಯುವಕರು ತಕ್ಷಣವೇ ಎಚ್ಚೆತ್ತುಕೊಂಡು ಇಸ್ಲಾಮಿಕ್ ಧರ್ಮಿಯ ಧ್ವಜ ಹಾಗೂ ಕೆಲವು ಅಲಂಕಾರಿಕ ಬಟ್ಟೆಗಳನ್ನು ಗಣೇಶ ಮೆರವಣಿಗೆಗೆ ಅಡ್ಡವಾಗದಂತೆ ಕಳಚಿ ಮೆರವಣಿಗೆಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ , ಇದರಿಂದ ಶಾಂತಿಯುತವಾಗಿ ಮೆರವಣಿಗೆ ಆದೇ ಮಾರ್ಗದಲ್ಲಿ ಸಾಗಿತಾದರು ಯಾವುದೇ ಗಲಾಟೆ ಕೋಮು ಧ್ವೇಶಗಳಿಗೆ ಆಸ್ಪಾಧ ನೀಡಲಿಲ್ಲ, ಇದರಿಂದ ಸೌಹಾರ್ದ ಯುತ ಗಣೇಶ್ ಉತ್ಸವ ಜರುಗಿತು, ಇನ್ನೂ ಸ್ಥಳಕ್ಕೆ ಬಂದ ಸಾರ್ವಜನಿಕರು ಅಚ್ಚರಿಯಿಂದ ಇವರ ಹಿಂದೂ ಮುಸ್ಲಿಂರ ಪ್ರೀತಿ ಸಹಕಾರ ಮನೋಭಾವವನ್ನು ಕಂಡು ಎಲ್ಲಾ ಧರ್ಮಗಳನ್ನು ಆರಾಧಿಸಬೇಕು ಎಂದು ಅರ್ಥಯಿಸಿಕೊಂಡು ಮುಂದೆ ಸಾಗಿದರು.

ಮೆರವಣಿಗೆ ಸಾಗಿದ ಬಳಿಕ ಮತ್ತೆ ಮುಸ್ಲಿಂ ಯುವಕರು ಬಿಚ್ಚಿದ ಬಾವುಟ ಧ್ವಜ ಹಾಗು ಬಟ್ಟೆಯನ್ನು ಪುನಃ ಕಟ್ಟಿದರು.

ಇನ್ನೂ ಗಣೇಶನ ಮೆರವಣಿಗೆಯಲ್ಲಿ ಯುವಕರು ಹುಚ್ಚೆದ್ದು ಕುಣಿದರಾದರೂ ಯಾವುದೇ ಗಲಾಟೆಗಳು ಇಲ್ಲದೆ ಶಾಂತಿಯುತವಾಗಿ ಗಣೇಶ ವಿರ್ಸಜನೆ ಮಾಡಿದರು..

ಹೇಳಿಕೆ :

ಈಡೀ ರಾಜ್ಯದಲ್ಲಿ ಪ್ರತಿ ವರ್ಷವೂ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬ ಬಂತೆಂದರೆ ಹಿಂದೂ ಮುಸ್ಲಿಂ ಗಲಾಟೆಗಳು ಕೋವು ಗಲಬೆಗಳು ಜರುಗತ್ತಲೆ ಇರುತ್ತವೆ ಆದರೆ ಚಳ್ಳಕೆರೆ ನಗರದಲ್ಲಿ ಮಾತ್ರ ಇತಂಹ ಗಲಾಟೆಗಳಿಗೆ ಇಲ್ಲಿನ ಮುತಾಲಿಖ್ ಗಳು, ಹಿಂದೂಗಳ ಮುಖಂಡರು ತಲಾ ತಲಾಂತರಗಳಿಂದ ಅಣ್ಣಾ ತಮ್ಮಂದಿರು ಎಂಬ ಮನೋ ಭಾವನೆಗಳನ್ನು ಉಳಿಸಿಕೊಂಡು ಬಂದಿರುವ ಕಾರಣ ಇಂತಹ ಅವಘಡಗಳಿಗೆ ಅವಕಾಶ ಕೊಟ್ಟಿಲ್ಲ‌

ಸೂಕ್ಷ್ಮ ಪ್ರದೇಶವಾದರೂ ಪೊಲೀಸ್ ಅಲರ್ಟ್ ಏಕಿಲ್ಲ :

ಭಾನುವಾರ ರಾತ್ರಿ 9.ಗಂಟೆ ಸುಮಾರಿಗೆ ಗಾಂಧಿನಗರದ ಗಣೇಶೋತ್ಸವ ಮೆರವಣಿಗೆ ಇದೇ ಮಾರ್ಗವಾಗಿ ದಾವಿಸಿತು , ಇಸ್ಲಾಮಿಕ್ ಧರ್ಮಿಯ ಧ್ವಜ, ಹಾಗು‌‌ ಚಪ್ಪರದಂತೆ‌ ಕಟ್ಟಿದ ಬಟ್ಟೆ ಗಣೇಶ‌ಮೂರ್ತಿಗೆ ತಾಗುವಂತಿತ್ತು, ಇನ್ನೂ ಮುಸ್ಲಿಂ ಯುವಕರ ಸಮಯಪ್ರಜ್ಞೆ ಹಾಗೂ ಸಹಕಾರ ಮನೋಭಾವದಿಂದ ಈ ಸ್ಥಳದಲ್ಲಿ ಯಾವುದೇ ಅವಘಡಗಳು ಸಂಭವಿಸಲಿಲ್ಲ, ಆಕಸ್ಮಿಕವಾಗಿಯೂ ಅಥವಾ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ‌ಸ್ಥಳದಲ್ಲಿ ಅವಘಡಗಳು ಸಂಭವಿಸಿದ್ದರೆ ಮಂಡ್ಯದ ನಾಗಮಂಗಲ ಗಲಾಟೆ ನಡೆದರು‌ ಅಚ್ಚರಿಯಿಲ್ಲ , ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಸ್ಥಳದಲ್ಲಿ ಇಲ್ಲದೆ ಇರುವುದು ಕಂಡು‌ ಬಂದಿತು,
ಕೊಂಚ ಏರು ಪೇರಾಗಿದ್ದರು ರಾತ್ರಿ‌ 9.ರ ಸಮಯದಲ್ಲಿ ಏನಾಗಬಹುದು ಯಾರೂ ಊಹಿಸಲು ಸಾಧ್ಯವಿಲ್ಲ.

ಇನ್ನದಾರೂ ಪೊಲೀಸ್ ಇಲಾಖೆಯಿಂದ ಪರವನಗೆ ಪಡೆದರು ಪಡೆಯದಿದ್ದರು ಶಾಂತಿ‌ಸುವ್ಯವಸ್ತೆ ಕಾಪಡಬೇಕಾದ ಕರ್ತವ್ಯ ಮರೆಯಬಾರದು, ಸೂಕ್ಷ್ಮ ಪ್ರದೇಶದ ವಲಯಗಳು ಗಮನದಲ್ಲಿರಲಿ ಎಂಬುದು ಸಾರ್ವಜನಿಕರ ಮಾತಾಗಿದೆ.

About The Author

Namma Challakere Local News
error: Content is protected !!