ದಾಳಿಂಬೆ ಬೆಳೆಯಲ್ಲಿ ತಂತ್ರಜ್ಞಾನವನ್ನು ಬಳಸಿ ರೈತರು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶರಣಬಸಪ್ಪ ಭೋಗಿ.

ನಾಯಕನಹಟ್ಟಿ:: ಸೆ .13.
ದಾಳಿಂಬ್ರೆ ಬೆಳೆಯುವ ಹೋಬಳಿಯ ಎಲ್ಲಾ ರೈತರು ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಕೆಫೆಕ್ ಹಾಗೂ ಏ.ಐ.ಸಿ. ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಿ. ಎಂದು ತೋಟಗಾರಿಕೆ ಉಪ ನಿರ್ದೇಶಕ ಶರಣಬಸಪ್ಪ ಭೋಗಿ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿ ಆವರಣದಲ್ಲಿ.ತೋಟಗಾರಿಕೆ ಇಲಾಖೆ ಚಳ್ಳಕೆರೆ. ತಾಲೂಕು 2024- 25ನೇ ಸಾಲಿನ ಪ್ರಚಾರ ಮತ್ತು ಸಾಹಿತ್ಯ ಕಾರ್ಯಕ್ರಮದಡಿ ದಾಳಿಂಬೆ ಬೆಳೆ ವಿಚಾರ ಸಂಕೀರಣ ಹಾಗೂ ದಾಳಿಂಬ್ರೆ ಬೆಳೆ ಕ್ಲಸ್ಟರ್ ಯೋಜನೆಯ ದಾಳಿಂಬೆ ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಚಳ್ಳಕೆರೆ ತಾಲೂಕಿನಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಹೊಸದಾಗಿ 2000 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲು ಹಾಗೂ ಪುನರ್ಜೀವಗೊಳಿಸಲು ರೈತರಿಗೆ ಉತ್ತೇಜನ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ದಾಳಿಂಬೆ ಬೆಳೆಗೆ ಸಂಬಂಧಿಸಿದಂತೆ ನಿಪುಣ ವಿಜ್ಞಾನಿಗಳನ್ನು ಬಳಸಿಕೊಂಡು ಬೆಳೆ ನಿರ್ವಹಣೆ ವೆಚ್ಚ ಕಡಿತ ಮಾಡುವುದು ಅತ್ಯಾಧುನಿಕ ಮಾದರಿಯಲ್ಲಿ ದಾಳಿಂಬೆ ಬೆಳೆಯೋ ಬಗ್ಗೆ ಹೆಚ್ಚಿನ ಒತ್ತು ನೀಡಿ ರೈತರಿಗೆ ಮಾರ್ಗದರ್ಶನ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಆದ್ದರಿಂದ ರೈತರು ಕ್ಲಸ್ಟರ್ ಮಟ್ಟದಲ್ಲಿ ಉತ್ತಮವಾಗಿ ದಾಳಿಂಬೆ ಬೆಳೆಯನ್ನು ಬೆಳೆಯಬಹುದು ಈ ಹಿಂದೆ ರಾಜ್ಯದಲ್ಲಿ ಅತಿ ಹೆಚ್ಚು ದಾಳಿಂಬೆ ಬೆಳೆಯುವ ಜಿಲ್ಲೆಯೆಂದರೆ ಅದು ಚಿತ್ರದುರ್ಗ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಭೂಮಿಯ ಫಲವತ್ತತೆ ಕಡಿಮೆಯಾಗಿದೆ ರೈತರು ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ಗೊಬ್ಬರ ಔಷಧಿ ಎಷ್ಟೆಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬ ಮಾಹಿತಿ ಕೊರತೆ ಇದೆ ಭೂಮಿಗೆ ಹೆಚ್ಚು ಗೊಬ್ಬರ ಔಷಧಿ ಹಾಕಿದರೆ ಭೂಮಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಆದ್ದರಿಂದ ಈ ಭಾಗದ ರೈತರು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು

ಇನ್ನೂ ತೋಟಗಾರಿಕೆ ಇಲಾಖೆ ಚಳ್ಳಕೆರೆ ಹಿರಿಯ ಸಹಾಯಕ ನಿರ್ದೇಶಕ ಆರ್ ವಿರೂಪಾಕ್ಷಪ್ಪ ಮಾತನಾಡಿದರು ಗ್ರಾಮೀಣ ಪ್ರದೇಶದ ಎಸ್ ಸಿ ಎಸ್ ಟಿ ಸಣ್ಣ ಅತಿ ಸಣ್ಣ ರೈತರಿಗೆ ನೇರಗಾ ಯೋಜನೆಅಡಿಯಲ್ಲಿ ರೈತರ ಜಾಬ್ ಕಾರ್ಡ್ಗಳನ್ನು ಬಳಕೆ ಮಾಡಿಕೊಂಡು ತೋಟ ಮಾಡಿಕೊಳ್ಳಲು ಅವಕಾಶ ಇದೆ.
ಇನ್ನೂ ಪಟ್ಟಣ ನಗರಸಭೆ ಪ್ರದೇಶದ ಜನರಿಗೆ ರಾಷ್ಟ್ರೀಯ ತೋಟಗಾರಿಕೆ ಇಲಾಖೆ ವತಿಯಿಂದ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ದಾಳಿಂಬ್ರೆ ವಿಜ್ಞಾನಿ ಡಾ. ಸುನಿಲ್ ತಮಗಲೆ, ಎಐಸಿ ಯೋಜನಾ ಸಂಯೋಜಕರಾದ ಎಂ ಚಂದ್ರಶೇಖರ್, ಮನೋಜ್ ಕುಶಲಪ್ಪ,
ಮುಖಂಡ ಬಂಡೆ ಕಪಿಲೆ ಓಬಣ್ಣ,
ಪಟ್ಟಣ ಪಂಚಾಯತಿ ಸದಸ್ಯರಾದ ಜೆ .ಆರ್ . ರವಿಕುಮಾರ್, ಶ್ರೀಮತಿ ಸುನಿತಾ ಜಿ.ಬಿ ಮುದಿಯಪ್ಪ, ಪಿ.ಓಬಯ್ಯ ದಾಸ್, ರೈತರರಾದ ಜಿ ಬಿ ಮುದಿಯಪ್ಪ, ಎಂ.ಡಿ. ಸಿದ್ದಿಕ್, ಜಾಕಿರ್ ಹುಸೇನ್, ಮಲ್ಲಕ್ ಬೋರಯ್ಯ, ನಲಗೇತನಹಟ್ಟಿ ಎತ್ತಿನ ಓಬಯ್ಯ, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ .ಪ್ರಕಾಶ್, ಗಜ್ಜುಗಾನಹಳ್ಳಿ ಡಿ ಬೋರಯ್ಯ, ರಂಗಸ್ವಾಮಿ, ಪ್ರಕಾಶ್, ಸೇರಿದಂತೆ ವಿವಿಧ ಹಳ್ಳಿಗಳ ರೈತರು ಇದ್ದರು

Namma Challakere Local News
error: Content is protected !!