ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಮಹಿಳಾ ರಾಜ್ಯಾಧ್ಯಕ್ಷರಾಗಿ ಚೈತ್ರ ಲಿಂಗರಾಜ್ ನೇಮಕ.
ಬೆಂಗಳೂರು:: ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಮಹಿಳಾ ರಾಜ್ಯಧ್ಯಕ್ಷರಾಗಿ ಚೈತ್ರ ಲಿಂಗರಾಜ್ ರವರನ್ನು ನೇಮಕ ಮಾಡಲಾಗಿದೆ.
ಅಹಿಂದ ಜನಸಂಘದ ಸಂಸ್ಥಾಪಕರು ಮತ್ತು ರಾಜ್ಯ ಅಧ್ಯಕ್ಷರಾಗಿರುವ ಅಯ್ಯಪ್ಪ ಗೌಡ ರವರು ಚೈತ್ರ ಲಿಂಗರಾಜ್ ಅವರನ್ನು ನೇಮಕ ಮಾಡಿ ಆಯಿಂದ ಸಮುದಾಯದ ಜನರು ಸಾಮಾಜಿಕ ಶೈಕ್ಷಣಿಕ ಆರ್ಥಿಕವಾಗಿ ಶ್ರೇಯೋ ಅಭಿವೃದ್ಧಿಗೆ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.
ಇನ್ನೂ ಚೈತ್ರ ಲಿಂಗರಾಜ್ ರವರು ತಮ್ಮ ನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ