ಗಣೇಶ್ ಚರ್ತುಥಿಗೆ ಪರವಾನಿಗೆ ಕಡ್ಡಾಯ : ಖಡಕ್ ಸೂಚನೆ ನೀಡಿದ ಪಿಎಸ್‌ಐ ಶಿವರಾಜ್
ಪೌರಾಯುಕ್ತರು, ಬೆಸ್ಕಾಂ, ಹಾಗೂ ಕಂದಾಯ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷö್ಯ..?
ಚಳ್ಳಕೆರೆ : ಗೌರಿ ಗಣೇಶ ಚರ್ತುಥಿಯಲ್ಲಿ ಅವಗಡಗಳು ಜರುಗದಂತೆ ಎಲ್ಲಾ ಬಾಂಧವರು ಸ್ನೇಹ ಪ್ರೀತಿಯಿಂದ ಹಬ್ಬವನ್ನು ಆಚರಿಸಿಬೇಕು ಗಣೇಶವನ್ನು ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಪರಿವಾನಿಗೆ ಪಡೆಯಬೇಕು ಎಂದು ಪಿಎಸ್‌ಐ ಶಿವರಾಜ್ ಹೇಳಿದರು.
ಅವರು ನಗರದ ಪೋಲಿಸ್ ಠಾಣೆ ಆವರಣದಲ್ಲಿ ಪೋಲಿಸ್ ಇಲಾಖೆವತಿಯಿಂದ ಗಣೇಶೋತ್ಸವ ಹಬ್ಬಗಳ ಆಚರಣೆ ಅಂಗವಾಗಿ ಸಾರ್ವಜನಿಕರಿಗೆ, ವಿವಿಧ ಸಂಘ ಸಂಸ್ಥೆಗಳ ಮುಖಂಡರಿಗೆ ಆಯೋಜಿಸಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗಣೇಶ ಪ್ರತಿಷ್ಠಾಪಿಸುವ ಸಂಘವು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು, ಗಣೇಶ ಕುರಿಸುವ ಸ್ಥಳವನ್ನು ಪೊಲೀಸ್ ಸಿಬ್ಬಂದಿಗೆ ತೋರಿಸಬೇಕು, ಹಾಗೂ ಬೆಸ್ಕಾಂ ಇಲಾಖೆ, ನಗರಸಭೆ, ಗ್ರಾಪಂ. ಹಾಗೂ ಪರಿಸರ ನೈರ್ಮಲ್ಯ ಇಲಾಖೆಯಿಂದ ಪರವಾನಿಗೆ ಪಡೆದ ನಂತರ ಒಪ್ಪಂದ ಪ್ರಕಾರ ಗಣೇಶ ಕುರಿಸಿ ವಿರ್ಸಜನೆ ಮಾಡಬೇಕು, ಸಮಾಜದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಕಾಪಾಡಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಈ ಬಾರಿಯೂ ಕೂಡ ಗೌರಿ ಗಣೇಶ ಹಬ್ಬ ಶಾಂತಿ ಸಂಕೇತವಾಗಿ ಆಚರಿಸಬೇಕು ಎಂದರು.
ಪೊಲೀಸ್ ಇಲಾಕೆ ಹಾಗೂ ನಗರಸಭೆ ಸೂಚಿಸಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು, ನಗರದಲ್ಲಿ ಹಬ್ಬಗಳ ದಿನದಂದು ಶಾಂತಿ ಕಾಪಾಡುವುದು ಸಾರ್ವಜನಿಕರ ಕರ್ತವ್ಯವಾಗಿದ್ದು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಾರ್ಯವನ್ನು ಕೈಗೊಂಡಿರುತ್ತದೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಇಲಾಖೆಯ ಮಾರ್ಗದರ್ಶನದಂತೆ ನಿಯಮಗಳನ್ನು ಪಾಲಿಸಿಕೊಂಡು ಹಬ್ಬಗಳನ್ನು ಆಚರಿಸಬೇಕು, ಪೊಲೀಸ್ ಇಲಾಖೆ ಇರುವುದು ಸಾರ್ವಜನಿಕರ ರಕ್ಷಣೆಗಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವುದು ಇಲಾಖೆ ಜವಾಬ್ದಾರಿಯಾಗಿರುತ್ತದೆ ಗಣೇಶ ಹಬ್ಬದಂದು ಪೊಲೀಸ್ ನಗರಸಭೆ, ಬೆಸ್ಕಾಂ, ಕಂದಾಯ ಇಲಾಖೆಗಳ ಅನುಮತಿ ಪಡೆದು ಪರಿಸರ ಸ್ನೇಹಿ ಮಣ್ಣಿನ ಗಣೇಶವನ್ನು ಪ್ರತಿಷ್ಠಾಪಿಸಬೇಕು ಸಂಜೆ 7ರಿಂದ ರಾತ್ರಿ 10ವರೆಗೆ ಮಾತ್ರ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿದ್ದು ಗಣೇಶ ವಿಸರ್ಜನೆಯ ದಿನ ಮೆರವಣಿಗೆ ಸಾಗುವ ಮಾರ್ಗಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬೇಕು ನಿಯಮಗಳನ್ನು ಉಲ್ಲಂಘಿಸಿದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಸಾರ್ವಜನಿಕರು ಸಹಕರಿಸಬೇಕು ಎಂದರು.

ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ ಈಡೀ ನಗರದಲ್ಲಿ ನೂರಾರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ, ಆದರೆ ವಿಸರ್ಜನೆಗೆ ಸೂಕ್ತವಾದ ಸ್ಥಳವಿಲ್ಲ ಆದ್ದರಿಂದ ನಗರಸಭೆಯಿಂದ ಕೆರೆಯಲ್ಲಿ ಹಾಗೂ ರೈಲ್ವೆ ಅಂಡರ್ ಪಾಸ್ ಪಕ್ಕದ ಹೊಂಡದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ ವಾಹನಗಳು ಸಮೀಪಕ್ಕೆ ಹೋಗುವುದಿಲ್ಲ ಇದರಿಂದ ಗಣೇಶ್ ವಿಸರ್ಜನೆಯಲ್ಲಿ ಅನಾಹುತಗಳ ಸಂಭವಿಸಬಹುದು ಆದ್ದರಿಂದ ವಿರ್ಸಜನೆ ಸ್ಥಳದಲ್ಲಿ ಬೆಳಿನ ವ್ಯವಸ್ಥೆ, ದಾರಿ ವ್ಯವಸ್ಥೆ, ಸ್ಥಳದಲ್ಲಿ ಪೊಲೀಸ್ ಕಾವಲು ಈಗೇ ರಕ್ಷಣೆ ನೀಡಿದ ಶಾಂತಿ ಸುವ್ಯವಸ್ಥೆ ಕಾಪಡಬೇಕು ಎಂದರು.

ಹೇಳಿಕೆ :
ಮಧ್ಯ ಕರ್ನಾಟಕ ಭಾಗದಲ್ಲಿ ಗಣೇಶ್ ಚರ್ತುಥಿಗೆ ತನ್ನದೇ ಆದ ಮಹತ್ವವಿದೆ, ಇಲ್ಲಿನ ಭಕ್ತರು ಸಾರ್ವಜನಿಕರು ಸಂಘ ಸಂಸ್ಥೆಯವರು ಗಣೇಶ್ ಪ್ರತಿಸ್ಠಾಪಿಸುತ್ತಾರೆ, ಆದರೆ ನಗರದಲ್ಲಿ ಶಾಂತಿ ಸುವವ್ಯವಸ್ಥೆ ಕಾಪಾಡಬೇಕಾದ ಕರ್ತವ್ಯ ಪೊಲೀಸ್ ಇಲಾಖೆ ಹಾಗೂ ನಗರಸಭೆ, ಬೆಸ್ಕಾಂ ಇಲಾಖೆಯದ್ದು ಆದರೆ ಇದವರೆಗೆ ಕೇವಲ ಪೊಲೀಸ್ ಇಲಾಖೆ ಮಾತ್ರ ಶಾಂತಿ ನಡೆಸಿ ಸಂಘಟನೆಗಳಿಗೆ ಸೂಚನೆ ನೀಡಿದ್ದಾರೆ ಆದರೆ ನಗರದಲ್ಲಿ ನಗರಸಭೆ, ಹಾಗೂ ಬೆಸ್ಕಾಂ, ಕಂದಾಯ ಅಧಿಕಾರಿಗಳ ಕರ್ತವ್ಯವೆನು ಎಂಬುದು ಸಂಘಟನೆಗಳ ಪ್ರಶ್ನೆಯಾಗಿದೆ. ಸಭೆಗೆ ಪೌರಾಯುಕ್ತರು ಹಾಗೂ ಬೆಸ್ಕಾ, ಕಂದಾಯ ಅಧಿಕಾರಿಗಳು ಬಾರದೆ ಇರುವುದು ಸಂಘಟಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂದರ್ಭದಲಿ.ಪಿಎಸ್ಐ ಶಿವರಾಜ್, ನಗರಸಭೆ ಸದಸ್ಯ ಹೊಯ್ಸಳ ಗೋವಿಂದ ಗಾಂಧಿನಗರದ ಡಿ.ಚಂದ್ರು. ಕೃಷ್ಣ, ಡಿಎಸ್‌ಎಸ್.ವಿಜಯ್ ಕುಮಾರ್, ಮಾತೃಶ್ರೀ ಮಂಜುನಾಥ್, ಹೊನ್ನುರಸ್ವಾಮಿ, ಡಾ.ಮಂಜುನಾಥ್, ಸೇರಿದಂತೆ ಗಣೇಶ ಸಂಘಗಳ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

Namma Challakere Local News
error: Content is protected !!